ತುಳುನಾಡಿನಲ್ಲಿ ತುಳುವರಿಗೊಂದು ಆಟಿ ಸಂಭ್ರಮತುಳುನಾಡಿನ ಪರಂಪರೆಯ ಹೊಸಬಗೆಯ ಆಚರಣೆಯಲೊಂದು. ತುಳುವರಿಗೆ ಆರ್ಥಿಕ ಪರಿಸ್ಥಿತಿ ಕೈ ಕಟ್ಟುತ್ತಿದ್ದರು. ಆಚರಣೆಗಳು ಹೊಸಬಗೆಯ ಕ್ರಮಗಳನ್ನು ತುಂಬಿ ಕಟ್ಟಿಕೊಡುತ್ತಿವೆ. ನಾಗರಾಧನೆ, ಧೈವರಾಧನೆ, ಸಿರಿಆರಾಧನೆಗಳನ್ನು ಮುಂದುವರಿಸಿಕೊಂಡು ಬಂದವರಿಗೆ ಆಟಿಯೂ ಒಂದು ವಿಶೇಷ ಆಚರಣೆ. ತುಳು ಭಾಷೆಯಲ್ಲಿ 4 ನೇ ತಿಂಗಳು ಅಂದರೆ ಜುಲಾಯಿ ತಿಂಗಳಲ್ಲಿ ಸಂಕ್ರಾಂತಿಯ ನಂತರ ಜುಲಾಯಿ 17 ರಿಂದ ಆಗಸ್ಟ್ 16 ರವರೆಗೆ ತುಳುನಾಡಿನಲ್ಲಿ ಆಟಿ ತಿಂಗಳು ಎಂದು ಕರೆಯಲಾಗುತ್ತದೆ. ಈ ತಿಂಗಳು ಹಿಂದೆ ಬಹಳಷ್ಟು ಕಠಿಣ ತಿಂಗಳು. ಧಾನ್ಯಗಳೆಲ್ಲ ಖಾಲಿಯಾಗಿ ಅಟ್ಟ ಗುಡಿಸುವ ದಿನಗಳು ಅದಲ್ಲದೆ ಉತ್ತಮ ಮಳೆ ಬರುವ ಕಾಲ. ಅತೀ ಹೆಚ್ಚು ಮಳೆ ಸುರಿಸುವ ನಕ್ಷತ್ರಗಳನ್ನು ಆಟಿ ತಿಂಗಳು ಹೊಂದಿರುವುದು, ಕೃಷಿ ಚಟುವಟಿಕೆಗಳಿಗೆ ವಿಶ್ರಾಂತಿಯ ಕಾಲ ಹಾಗೂ ಭತ್ತ ನಾಟಿಯ ಸಮಯ ಆಟಿಯಾಗಿರುತ್ತದೆ. ಅದಲ್ಲದೆ ಹಲವಾರು ಆಚರಣೆಗಳನ್ನು , ಕ್ರಮ, ಪದ್ಧತಿಯನ್ನು ಆಟಿ ತಿಂಗಳಲ್ಲಿ ಆಚರಿಸುವುದು ಹಿಂದಿನಿಂದಲು ರೂಢಿಯಾಗಿ ಬಂದಿದೆ, ನವವಧು ಅಂದರೆ ಹೊಸತಾಗಿ ಮದುವೆಯಾದ ಹೆಣ್ಣು ಮಗಳನ್ನು ತವರಿಗೆ ಕರೆದುಕೊಂಡು ಬರುವುದು ಹಾಗೂ ಸೊಸೆಯನ್ನು ತವರಿಗೆ ಕಳುಹಿಸುವುದು ಈ ಪದ್ಧತಿಯನ್ನು ತುಳುವಿನಲ್ಲಿ “ಆಟಿ ಕುಲ್ಲುನ ” ಪದ್ಧತಿ ಎಂದು ಕರೆಯಲಾಗುತ್ತದೆ ಅದಲ್ಲದೆ ಅವರಿಗಾಗಿ ಮಾಡುವ ನಾಟಿಕೋಳಿ ಅಡುಗೆಯನ್ನು “ಆಟಿ ತಮ್ಮಣ” ಎಂದು ಕರೆಯಲಾಗುತ್ತದೆ. ಬಹುಮುಖ್ಯವಾಗಿ ಆಟಿ ತಿಂಗಳಲ್ಲಿ ಯಾವುದೇ ಶುಭಾಶಮಾರಂಭಗಳನ್ನು ಮಾಡಲಾಗುವುದಿಲ್ಲ.
ಆಟಿ ಕಳೆಂಜ: ತುಳುನಾಡಿನ ಮುಖ್ಯ ಆರಾಧನೆಯಾದ ದೈವಗಳು ಘಟ್ಟಕ್ಕೆ ಹೋಗುತ್ತದೆ ಎಂಬ ನಂಬಿಕೆ ಇದೆ, ಅಂತಹ ಸಮಯದಲ್ಲಿ ದೈವದ ರೂಪದಲ್ಲಿ ಆಟಿ ಕಳಂಜ ಬರುವುದು ಎಂಬುದು ನಂಬಿಕೆಯಾಗಿ ತಲತಲಾಂತರಗಳಿಂದ ಬಂದಿದೆ. ಈ ಪದ್ಧತಿಯು ಈಗಲೂ ಕೆಲವೆಡೆ ಚಾಲ್ತಿಯಲ್ಲಿದೆ. ಹಾಗೂ ಮರೆಯಂಚಿನಲ್ಲಿ ಈ.. ಸಂಪ್ರದಾಯವಿದೆ ಎನ್ನುವುದು ತುಳುವರಿಗೆ ಒಂದಿಷ್ಟು ಬೇಸರವನ್ನು ತಂದುಕೊಟ್ಟಿದೆ.
ತಿಂಡಿ ತಿನಿಸು : ಆಟಿ ತಿಂಗಳಲ್ಲಿ ಒಂದಿಷ್ಟು ತಿಂಡಿಗಳ್ಳನ್ನು ವಿಶೇಷವಾಗಿ ತಯಾರಿಸಲಾಗುವುದು.. ಪತ್ರಡೆ, ಕನಿಲೆ ಸಾಂಬಾರ್, ಹಲಸಿನಹಣ್ಣಿನ ಹಿಟ್ಟು ಹಾಗೂ ಕರಿದತಿಂಡಿ, ಉಪಡ್ ಪಚ್ಚಿಲ್, ತಿಮರೆ ಚಟ್ನಿ ಇನ್ನಿತರ ತಿನಿಸುಗಳು..ಆಟಿ ತಿಂಗಳ ಬಹುಮುಖ್ಯವಾದ ವಿಶೇಷವೇನೆಂದರೆ ಆಟಿ ಅಮಾವಾಸ್ಯೆ ಈ ದಿನ ಹಾಳೆ ಮರ ಅಂದರೆ ಒಂದು ಸಾವಿರ ಔಷಧಿ ಗುಣ ಹೊಂದಿರುವ ಮರದ ತೋಗಟೆಯ ಕೆತ್ತೆಯನ್ನು ತಂದು ಜಜ್ಜಿ ಶುಂಠಿ, ಬೆಳ್ಳುಳ್ಳಿ ಜೀರಿಗೆ ಹಾಕಿ ಅರೆದು ಅದರ ರಸವನ್ನು ಖಾಲಿ ಹೊಟ್ಟೆಗೆ ಕುಡಿಯುವ ಪದ್ಧತಿ. ಈ ರೀತಿಯಾಗಿ ಒಂದು ಸಾವಿರ ಔಷಧಿ ಗುಣ ಹಾಲೆ ಮರ ಹೊಂದಿರುವುದು ಆಟಿ ಅಮಾವಾಸ್ಯೆ ಯ ದಿನ ಮಾತ್ರ ಎಂಬುದು ಹಿರಿಯರ ನಂಬಿಕೆ.
ಈ ರಸವನ್ನು ಸೇವಿಸಿದರೆ ಒಂದು ವರ್ಷ ಯಾವುದೇ ರೋಗ ರೂಜಿನ ಬರುವುದಿಲ್ಲ ಎಂಬುದು ಹಿರಿಯರ ಮಾತು. ಇದರೊಂದಿಗೆ ಈ ದಿನವೇ ತೀರ್ಥಸ್ಥಾನ ದೇವಾಲಯಗಳಿಗೆ ಭೇಟಿ ಕೊಟ್ಟು ದವಸಧಾನ್ಯಗಳನ್ನು ತರ್ಪನ ಬಿಡುವ ಕ್ರಮವು ಇದೆ.ಆಟಿ ಅಮಾವಾಸ್ಯೆಯ ದಿನ ತುಳುವರಲ್ಲಿ ಹೆಚ್ಚಾಗಿ ಮಾಂಸದ ಅಡುಗೆ ಮಾಡುವ ಪದ್ಧತಿ ಈ ಎಲ್ಲಾ ಆಚರಣೆಗಳನ್ನು ಕೇವಲ ತುಳುನಾಡ್ ನಾಡಿನಲ್ಲಿ ಮಾತ್ರ ಕಾಣಲು ಸಾಧ್ಯ.ಆಟಿ ತಿಂಗಳು ವಿಶೇಷವಾದ ಕ್ರಮ ಆಚರಣೆಗಳನ್ನು ತುಳುವರಿಗೆ ಕಟ್ಟಿಕೊಟ್ಟಿದೆ ಇದೊಂದು ತುಳುವರ ಭಾಗ್ಯವೇ ಸರಿ. ಪುರಾತನವಾದ ಹಿರಿಯರು ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿರುವ ಇಂತಹ ಆಚರಣೆಗಳು ಅಳಿವಿನಂಚಿಗೆ ಸಾಗುತಿದ್ದು ಮುಂದಿನ ಪೀಳಿಗೆಗೆ ಕಣ್ಮರೆಯಾಗಲು ಬಹುದು. ಇಂತಹ ಕ್ರಮಗಳನ್ನು ಉಳಿಸಿ ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ನಿಮ್ಮೆಲರದಾಗಿದೆ.
ಬರಹ : ತೇಜಸ್ವಿನಿ ಬೊಮ್ಮೆಟ್ಟಿ