ಸಂಘ ಪರಿವಾರದ ಮಹಿಳಾ ಘಟಕದ ವತಿಯಿಂದ ಜು.29 ರಂದು ಸದರ್ನ್ ರೆಸಿಡೆನ್ಸಿ ಹಾಲ್ ನಲ್ಲಿ ಪತ್ರಿಕಾಗೋಷ್ಟಿ ನಡೆಯಿತು.ಗೋಷ್ಠಿಯಲ್ಲಿ ಮಾತನಾಡಿದ ಡಾ. ಯಶೋಧಾ ರಾಮಚಂದ್ರ, ಪ್ರವೀಣ್ ಹತ್ಯೆಯ ದುಃಖ ಕುಟುಂಬದವರಿಗೆ ಮಾತ್ರವಲ್ಲ ಹಿಂದೂ ಸಮಾಜಕ್ಕೆ ಆದಂತಹ ದೊಡ್ಡ ನಷ್ಟ. ಇದರ ಕುರಿತಾಗಿ ಯುವ ಕಾರ್ಯಕರ್ತರ ಹೋರಾಟ ಮೇಲಿನ ರಾಜಕಾರಣಿಗಳಿಗೆ ತಲುಪಿದ್ದು ಕಾನೂನು ಪ್ರಕಾರ ತೀರ್ಮಾನ ಮಾಡುತ್ತಾರೆ. ಮುಂದೆ ಕಠಿಣ ಕ್ರಮ ಕೈಗೊಳ್ಳಲಿರುವರು ಎಂಬ ಭರವಸೆ ಇದೆ. ಪ್ರವೀಣ್ ಹತ್ಯೆ ವಿಚಾರದಲ್ಲಿ ಹಿಂದೂ ಸಮಾಜ ರೋಷಗೊಳ್ಳುವುದು ಸಹಜ ಆದರೆ ಸಮಸ್ಯೆಗೆ ಕಾದು ಪರಿಹಾರ ಕಂಡು ಕೊಳ್ಳಬೇಕೇ ಹೊರತು ಒಂದೇ ಬಾರಿಗೆ ಸರಿಪಡಿಸಲು ಅಸಾಧ್ಯ. ಆತನಿಗೆ ನ್ಯಾಯ ಸಿಗುವಲ್ಲಿ ನಾವು ಸಹಾ ಜೊತೆಗೂಡಿ ಸಹಕರಿಸುತ್ತೇವೆ ಎಂದು ಮನವಿ ಮಾಡಿದರು.
ನಂತ್ರ ಮಾತನಾಡಿದ ಪದ್ಮಾವತಿ ಕಾಮತ್ ಮಾತನಾಡಿ, ಇಷ್ಟು ಮಕ್ಕಳ ಬಲಿ ಪಡೆಯುತ್ತಿರುವಾಗ ಕರ್ನಾಟಕ ಸರಕಾರ ಏನು ಮಾಡುತ್ತಿದೆ ಎಂದು ಪ್ರಶ್ನೆ ಹಾಕಿದರಲ್ಲದೆ ರಾಜೀನಾಮೆ ಕೊಟ್ಟರೆ ನಮ್ಮಿಂದ ಪಕ್ಷ ಉಳಿಸಲಾಗದು. ಮುಂದೆಯೂ ಮೋದಿ ಬರಬೇಕು ಅಂದರೆ ಕರ್ನಾಟಕ ಸರ್ಕಾರ ಗಟ್ಟಿ ಇರಬೇಕು. ಹಾಗಾಗಿ ರಾಜೀನಾಮೆ ಕೊಟ್ಟವರು ಪುನಃ ಪಕ್ಷಕ್ಕೆ ಬರಬೇಕು. ಬಿಜೆಪಿ ಪಕ್ಷದವರು ಮಾತ್ರ ಹಿಂದುಗಳಲ್ಲ ಎಲ್ಲ ಪಕ್ಷದಲ್ಲಿಯೂ ಹಿಂದೂಗಳಿದ್ದಾರೆ ಪ್ರವೀಣ್ ಹತ್ಯೆ ಕುರಿತಾಗಿ ನಾವು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಮಾಡಿದ್ದು ಮುಂದೆ ಯುವ ಕಾರ್ಯಕರ್ತರ ಜೊತೆ ನಾವು ಇರುತ್ತವೆ ಎಂದರು.
ಗೋಷ್ಠಿಯಲ್ಲಿ ಶ್ರೀಮತಿ ಗುಣವತಿ ಕೊಲ್ಲಂತಡ್ಕ, ಪುಷ್ಪಾವತಿ ಬಾಳಿಲ , ಪುಲಸ್ತ್ಯ ರೈ, ಕು. ಭಾಗಿರತಿ ಮುರುಳ್ಯ ಉಪಸ್ಥಿತರಿದ್ದರು