ಗುರಿಯ ಸೇರೋ ತವಕದಲ್ಲಿ ಸಾಗಿದೆ ದಿನವು,
ಸೋಲು ಗೆಲುವ ಆಟದಲ್ಲಿ ಕುಗ್ಗದ ಮನವು…
ನಾಳೆಯೆಂಬ ಚಿಂತೆಯಲ್ಲಿ ಮುಗಿದಿದೆ ಇಂದು,
ವಾಸ್ತವತೆಯೇ ಬದುಕು ಇಲ್ಲಿ ತಿಳಿದಿರಲೆಂದೂ…
ಬದುಕಿನ ಈ ಪಯಣದಲ್ಲಿ ಪರೀಕ್ಷೆಯು ಸಹಜ,
ಸೋಲು ಗೆಲುವ ಹಾದಿಯಲ್ಲಿ ನಿರೀಕ್ಷೆಯು ಸಹಜ…
ಸೋಲು ಬದುಕ ಅಂತ್ಯವಲ್ಲ ಅರಿತುಕೋ ಮನುಜ,
ಸೋಲಿನಲ್ಲೂ ಗೆಲುವ ಹುಡುಕಿ ಸಾಗು ನೀ ಮನುಜ…
ಕಳೆದ ಕಷ್ಟ ದಿನಗಳನ್ನು ಮಾಡಿಕೋ ಮನನ,
ಮುಂಬರುವ ಸವಾಲೆಡೆಗೆ ಇರಲಿ ಗಮನ…
✍️ಉಲ್ಲಾಸ್ ಕಜ್ಜೋಡಿ