Ad Widget

ನಳಿನ್, ಅಂಗಾರ, ಸುನಿಲ್ ಗೆ ಮತ್ತೊಮ್ಮೆ ಘೇರಾವ್ : ಬೇಗನೇ ಕಾಲ್ಕಿತ್ತ ನಾಯಕರು

ಬೆಳ್ಳಾರೆ: ನಳೀನ್ ಕುಮಾರ್ ಕಟೀಲ್, ಸಚಿವ ಎಸ್ ಅಂಗಾರ ಹಾಗೂ ಮತ್ತಿತರ ನಾಯಕರಿಗೆ ಹಿಂದೂ ಕಾರ್ಯಕರ್ತರು ಘೇರಾವ್ ಹಾಕಿದ ಘಟನೆ ನಡೆಯಿತು. ಈರ್ ರಡ್ ದಿನ ಬತ್ ಪೋಪಾರ್. ಬಕ್ಕ ನರಕ ನಮ ಬರೋಡು ಎಂದು ಕಾರ್ಯಕರ್ತರು ಗಟ್ಟಿ ದನಿಯಲ್ಲಿ ಬೊಬ್ಬೆ ಹೊಡೆದರು. ಒಂದಷ್ಟು ಹೊತ್ತು ನೆಟ್ಟಾರು ಮನೆ ಬಳಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಯಿತು. ಕಾರ್ಯಕರ್ತರ...

ಪ್ರವೀಣ್ ಹತ್ಯೆ ಆರೋಪಿಗಳು ಕೋರ್ಟ್ ಗೆ

ಬೆಳ್ಳಾರೆ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಸ್ಕೆಚ್ ಹಾಕಿರುವ ಆರೋಪಿಗಳನ್ನು ಇಂದು ಸಂಜೆ ಕೋರ್ಟ್ ಗೆ ಹಾಜರು ಪಡಿಸಲು ಪುತ್ತೂರು ಕೋರ್ಟ್ ಗೆ ಕರೆದೊಯ್ಯಲಾಗಿದೆ. ತನಿಖಾ ದೃಷ್ಟಿಯಿಂದ ಪೊಲೀಸರು ಮಾಧ್ಯಮಕ್ಕೆ ಹೆಚ್ಚಿನ ಮಾಹಿತಿ ನೀಡಿಲ್ಲ.
Ad Widget

ನಾವು ಬರೀ ಹೇಳುವುದಿಲ್ಲ!! ಸೂಕ್ತ ವ್ಯವಸ್ಥೆ ಖಂಡಿತಾ ಆಗುತ್ತದೆ – ಸಿಎಂ ಬೊಮ್ಮಾಯಿ

ಬೆಳ್ಳಾರೆ: ಪ್ರವೀಣ್ ನೆಟ್ಟಾರು ಅವರ ಹತ್ಯೆಯ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಂಡಿದೆ. ಈಗಾಗಲೇ ಪ್ರಾಥಮಿಕ ತನಿಖೆ ಮುಗಿದಿದ್ದು ಕೃತ್ಯಕ್ಕೆ ಸಹಕರಿಸಿದವರನ್ನು ಬಂಧಿಸಲಾಗಿದೆ. ಈ ಜಾಲ ದೇಶಾದ್ಯಂತವೂ ಹಬ್ಬಿದ್ದು ನಮ್ಮ ಸರಕಾರ ಬರೀ ಹೇಳುವುದಲ್ಲ.ಅವರನ್ನು ಮಟ್ಟ ಹಾಕಿಯೇ ತೀರುತ್ತೇವೆ ಎಂದು ಸಿ.ಎಂ ಬಸವರಾಜ ಬೊಮ್ಮಾಯಿ ಹೇಳಿದರು.ನೆಟ್ಟಾರಿನ ಪ್ರವೀಣ್ ಅವರ ಮನೆಗೆ ಸಿಎಂ ಭೇಟಿ ನೀಡಿ ಮನೆಯವರಿಗೆ...

ವಳಲಂಬೆ : ಅನ್ಯಧರ್ಮಿಯ ಅಂಗಡಿ ಧ್ವಂಸ

ವಳಲಂಬೆ ಬಸ್ ನಿಲ್ದಾಣದ ಬಳಿಯ ಅಬ್ಬಾಸ್ ಅವರ ಅಂಗಡಿ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಧ್ವಂಸಗೊಂಡಿದೆ.

ಗುತ್ತಿಗಾರು ಅನ್ಯ ಧರ್ಮೀಯರ ಅಂಗಡಿಗಳಿಗೆ ಹಾನಿ

ಕೊಲೆ ಆರೋಪಿ ಶಫಿಕ್ ಬಂಧನವಾಗುತ್ತಲೆ ಆಕ್ರೋಶಗೊಂಡ ಗುತ್ತಿಗಾರಿನ ಹಿಂದೂ ಸಂಘಟನೆಗಳು ಆತ ಕೆಲಸ ಮಾಡುತ್ತಿದ್ದ ಅಡಿಕೆ ಅಂಗಡಿ ಸೇರಿದಂತೆ ಅನ್ಯ ಧರ್ಮೀಯರ ಎಲ್ಲಾ ಅಂಗಡಿಗಳನ್ನು ಹಾನಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಸುಮಾರು 500 ಕ್ಕು ಮಿಕ್ಕಿ ಕಾರ್ಯಕರ್ತರು ಆಕ್ರೋಶಿತರಾಗಿ ಈ ಕೃತ್ಯ ಮಾಡಿದ್ದಾರೆ ಎನ್ನಲಾಗಿದೆ.

ಇಂದು ಸಂಜೆ ಬೆಳ್ಳಾರೆಗೆ ಮುಖ್ಯ ಮಂತ್ರಿ

ಸುಳ್ಯ: ದುಷ್ಕರ್ಮಿಗಳಿಂದ ಹತ್ಯೆಯಾದ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸಂಜೆ ಭೇಟಿ ನೀಡಲಿದ್ದಾರೆ. ಬೆಂಗಳೂರು ಕೆಂಪೇ ಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 3.30ಕ್ಕೆ ಹೊರಟು 4.25 ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು. 6.30ಕ್ಕೆ ಬೆಳ್ಳಾರೆಗೆ ಆಗಮಿಸಿದ ನಂತರ ಪ್ರವೀಣ್ ನೆಟ್ಟಾರು ಅವರ...

ಗುತ್ತಿಗಾರು : ಪ್ರಗತಿ ಅಡಿಕೆ ಹಾಗೂ ದಿನಸಿ ಅಂಗಡಿ ಪುಡಿ ಪುಡಿ

ಗುತ್ತಿಗಾರಿನ ಅಬೂಬಕ್ಕರ್ ಬೆಳ್ಳಾರೆ ಮಾಲಕತ್ವದ ಪ್ರಗತಿ ಎಂಟರ್ ಪ್ರೈಸಸ್ ಅಡಿಕೆ ಅಂಗಡಿಯಲ್ಲಿ ಕೆಲಸಕ್ಕಿದ್ದ ಶಫೀಕ್ ಬೆಳ್ಳಾರೆ ಕೊಲೆ ಆರೋಪದಲ್ಲಿ ಬಂದಿತರಾಗುತ್ತಿದ್ದಂತೆ ಜನರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಸಂಘಟನೆ ಸದಸ್ಯರು ಸೇರಿ ಅಂಗಡಿಗೆ ಹಾನಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಬೆಳ್ಳಾರೆ: ಲಾಠಿಚಾರ್ಜ್ ವೇಳೆ ಗಾಯಗೊಂಡ ಕಾರ್ಯಕರ್ತರನ್ನು ಭೇಟಿ ಮಾಡಿದ ಸಚಿವ ಎಸ್.ಅಂಗಾರ

ಪ್ರವೀಣ್ ಪೂಜಾರಿ ಕೊಲೆ ಸಂಬಂಧಿಸಿದಂತೆ ಬೆಳ್ಳಾರೆಯಲ್ಲಿ ಜು.27ರಂದು ನಡೆದ ಲಾಠಿಚಾರ್ಜ್ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಇಬ್ಬರು ಕಾರ್ಯಕರ್ತರನ್ನು ಸಚಿವ ಎಸ್.ಅಂಗಾರ ಅವರು ಜು.27 ರಂದು ರಾತ್ರಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಗುತ್ತಿಗಾರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೊಲೆ ಆರೋಪಿ

ಗುತ್ತಿಗಾರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೊಲೆ ಆರೋಪಿ ಗುತ್ತಿಗಾರು ಪ್ರಗತಿ ಎಂಟರ್ ಪ್ರೈಸಸ್ ಉದ್ಯೋಗಿಯಾಗಿರುವ ಶಫೀಕ್ ಬೆಳ್ಳಾರೆ ಕೊಲೆ ಆರೋಪದಲ್ಲಿ ಬಂಧಿತನಾಗಿರುವುದು ಗುತ್ತಿಗಾರಿನ ಜನತೆಗೆ ತಿಳಿಯುತ್ತಿದ್ದಂತೆ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಮಾಡಿದ  ಆರೋಪಿಗಳ ಪೈಕಿ ಇಬ್ಬರ ಬಂಧನ

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಸ್ಥಳೀಯ ನಿವಾಸಿಗಳು ಎಂದು ತಿಳಿದು ಬಂದಿದೆ. ಆರೋಪಿಗಳ   ಪೈಕಿ ಸವಣೂರು ನಿವಾಸಿ ಝಾಕೀರ್ ಹಾಗೂ ಬೆಳ್ಳಾರೆ ನಿವಾಸಿ ಶಫೀಕ್ ಬಂಧಿತರು ಎಂದು ತಿಳಿದು ಬಂದಿದೆ.
Loading posts...

All posts loaded

No more posts

error: Content is protected !!