- Thursday
- November 21st, 2024
ಕಳಂಜದಲ್ಲಿ ಹತ್ಯೆಗೊಳಗಾದ ಶಹೀದ್ ಮಸೂದ್ ಕುಟುಂಬಸ್ಥರು ದ.ಕ ಜಿಲ್ಲಾಧಿಕಾರಿಯನ್ನು ಮತ್ತು ಪೊಲೀಸ್ ಅಧೀಕ್ಷಕರನ್ನು ಭೇಟಿಯಾಗಿ ನ್ಯಾಯಕ್ಕಾಗಿ ಒದಗಿಸುವಂತೆ,ಕೊಲೆಗಡುಕರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು. ಹಾಗೂ ಸರ್ಕಾರದಿಂದ 25 ಲಕ್ಷ ರೂಪಾಯಿ ಪರಿಹಾರ ಧನ ಕೊಡಲು ಶಿಫಾರಸು ಮಾಡುವಂತೆಯೂ ಇದೇ ಸಂದರ್ಭದಲ್ಲಿ ವಿನಂತಿಸಿದರು. ನಿಯೋಗದಲ್ಲಿ ಮಸೂದ್‌ನ ತಾಯಿ ಸಾರಮ್ಮ ,ಸಹೋದರ ಇರ್ಶಾದ್ , ಮಿರ್ಶಾದ್, ಸಹೋದರಿ ಶಿಫಾನ,...
ಗ್ರಾಮ ಪಂಚಾಯತ್ ಐವರ್ನಾಡು, ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಐವರ್ನಾಡು ಮತ್ತು ನವಚೇತನ ಯುವಕ ಮಂಡಲ (ರಿ.) ಬೊಳುಬೈಲು ಇವುಗಳ ಸಂಯುಕ್ತ ಆಶ್ರಯದಲ್ಲಿ ಇಂದು ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ - 1837ರ ಉಪನ್ಯಾಸ ಮಾಲಿಕೆಯ ಎರಡನೇ ಉಪನ್ಯಾಸ ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡುನಲ್ಲಿ ನಡೆಸಲಾಯಿತು....
ವಳಲಂಬೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಭೆ ಜು. 24 ರಂದು ದೇವಸ್ಥಾನದ ವಠಾರದಲ್ಲಿ. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ. ಅಧ್ಯಕ್ಷರಾಗಿ ದುರ್ಗೇಶ್ ಪಾರೆಪ್ಪಾಡಿ, ಕಾರ್ಯದರ್ಶಿಯಾಗಿ ರವೀಂದ್ರ ಹೊಸೊಳಿಕೆ, ಖಜಾಂಜಿಯಾಗಿ ಲೋಹಿತ್ ಚೈಪೆ ಯವರನ್ನು ಆಯ್ಕೆ ಮಾಡಲಾಯಿತು. ,
ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ನಾಗಾರಾಧನೆಯ ಪುಣ್ಯ ತಾಣ ಮತ್ತು ರಾಜ್ಯದ ನಂಬರ್ ವನ್ ಆದಾಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.25 ರಂದು ಸರಳ ಸಾಮೂಹಿಕ ವಿವಾಹ ನಡೆಯಲಿದೆ. ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕುಕ್ಕೆ ದೇವಳದಲ್ಲಿ ಜನ ಸಾಮಾನ್ಯರ ಅನುಕೂಲಕ್ಕಾಗಿ ಸಪ್ತಪದಿ ಸಾಮೂಹಿಕ ಸರಳ ವಿವಾಹ...
ಅಮರಮಡ್ನೂರು ಗ್ರಾಮದ ಕಲ್ಲುಮಲೆ ಎಂಬಲ್ಲಿ ವಾಸವಾಗಿರುವ ಅಶಕ್ತ ಬಡಕುಟುಂಬದ ನಾರಾಯಣ ಮುಗೇರ ಮತ್ತು ಗಂಗು ದಂಪತಿಗಳ ಮನೆಯು ಗಾಳಿ ,ಮಳೆಯ ಸಂದರ್ಭದಲ್ಲಿ ಹಾನಿಗೊಂಡದ್ದನ್ನು ಮನಗಂಡು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಂಯೋಜಕ ನಂದಕುಮಾರ್ ರವರು ಸ್ಥಳೀಯ ಪಂಚಾಯತ್ ಸದಸ್ಯ ಅಶೋಕ್ ಚೂಂತಾರ್‌ರವರೊಂದಿಗೆ ಸ್ಥಳಕ್ಕೆ ತೆರಳಿ ಬಡ ಕುಟುಂಬಕ್ಕೆ ನೆರವು ನೀಡಿದ್ದಾರೆ. ಈ ಸಂದರ್ಭದಲ್ಲಿ ಸುಳ್ಯ ನಗರ...