ಕಳಂಜದಲ್ಲಿ ಹತ್ಯೆಗೊಳಗಾದ ಶಹೀದ್ ಮಸೂದ್ ಕುಟುಂಬಸ್ಥರು ದ.ಕ ಜಿಲ್ಲಾಧಿಕಾರಿಯನ್ನು ಮತ್ತು ಪೊಲೀಸ್ ಅಧೀಕ್ಷಕರನ್ನು ಭೇಟಿಯಾಗಿ ನ್ಯಾಯಕ್ಕಾಗಿ ಒದಗಿಸುವಂತೆ,ಕೊಲೆಗಡುಕರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು. ಹಾಗೂ ಸರ್ಕಾರದಿಂದ 25 ಲಕ್ಷ ರೂಪಾಯಿ ಪರಿಹಾರ ಧನ ಕೊಡಲು ಶಿಫಾರಸು ಮಾಡುವಂತೆಯೂ ಇದೇ ಸಂದರ್ಭದಲ್ಲಿ ವಿನಂತಿಸಿದರು.
ನಿಯೋಗದಲ್ಲಿ ಮಸೂದ್‌ನ ತಾಯಿ ಸಾರಮ್ಮ ,ಸಹೋದರ ಇರ್ಶಾದ್ , ಮಿರ್ಶಾದ್, ಸಹೋದರಿ ಶಿಫಾನ, ಮಾವಂದಿರಾದ ಶೌಕತ್ ಕಳಂಜ,ಹೈದರ್ ಕಳಂಜ ಹಾಗೂ ಸ್ಥಳೀಯರಾದ ಫೈಝಲ್ ಬೆಳ್ಳಾರೆ, ಹಮೀದ್ ಮರಕ್ಕಡ ಉಪಸ್ಥಿತರಿದ್ದರು.