ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ,ಇದರ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ, ಸ್ನಾತಕೋತ್ತರ ಸಮಾಜ ಕಾರ್ಯ ವೇದಿಕೆಯ ಉದ್ಘಾಟನೆ ಹಾಗೂ ಒಂದು ದಿನದ “ವ್ಯಕ್ತಿತ್ವ ವಿಕಾಸನ” ಕಾಕಾರ್ಯಕ್ರಮವು ಜು.20 ರಂದು ಕಾಲೇಜಿನ ಬಾಬಾ ಸಾಹೇಬ್ ಬಿ.ಆರ್ . ಅಂಬೇಡ್ಕರ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಘವ ಎನ್ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಕೆಲಸ ಮಾಡುವುದು ಸಮಾಜದೊಂದಿಗೆ ಬೆರೆತುಕೊಂಡಿದೆ. ಪ್ರತಿಯೊಬ್ಬ ಮನುಷ್ಯನ ಮನುಷ್ಯತ್ವಕ್ಕೆ ವ್ಯಕ್ತಿತ್ವಕ್ಕೆ ಬೆಲೆ ಕೊಡಬೇಕು, ಸಮಾಜದಲ್ಲಿ ಒಳ್ಳೆಯ ವ್ಯಕ್ತಿ ಬೆಳೆಯಬೇಕು. ಮೊದಲು ನಾವು ನಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಲು ಇಂತಹ ವ್ಯಕ್ತಿತ್ವ ವಿಕಸನ ಕಾರ್ಯಗಳು ಬಹಳ ಉಪಯುಕ್ತವಾಗಿವೆ ಎಂದರು. ಮುಖ್ಯಅತಿಥಿಯಾಗಿ ಡಾ.ಮಂಜುನಾಥ್ ಜಿ, ಸಹಾಯಕ ಪ್ರಾಧ್ಯಾಪಕರು ಅರ್ಥಶಾಸ್ತ್ರ ವಿಭಾಗದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಅರ್ಚನಾ ರವರು ವಹಿಸಿದ್ದರು. ವೇದಿಕೆಯಲ್ಲಿ ಸಮಾಜ ಕಾರ್ಯ ವೇದಿಕೆಯ ನೂತನ ಅಧ್ಯಕ್ಷರಾದ ಶ್ರೇಯಸ್. ಬಿ ದ್ವಿತೀಯ ಎಂ.ಎಸ್.ಡಬ್ಲ್ಯೂ,
ಕಾರ್ಯದರ್ಶಿಯಾದ ರಾಹಿಲ್, ಎಂ.ಎಸ್.ಡಬ್ಲ್ಯೂ, ಜೆಸಿ ಪ್ರದೀಪ್ ಬಾಕಿ, ವಲಯ ತರಬೇತುದಾರರು ಜೆಸಿಐ -ಇಂಡಿಯಾ ಇವರು ಪ್ರಥಮ ವ್ಯಕ್ತಿತ್ವದ ವಿಕಾಸನದ ಬಗ್ಗೆ ತರಬೇತಿ ಕಾರ್ಯವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸ್ನಾತಕ ಸಮಾಜ ಕಾರ್ಯ ಮತ್ತು ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು, ಉಪನ್ಯಾಸಕರು ಭಾಗವಹಿಸಿದ್ದರು.
ಕು.ಧನ್ಯಶ್ರೀ ಎಂ.ಎಸ್. .ಡಬ್ಲ್ಯೂ ಸ್ವಾಗತಿಸಿ