Ad Widget

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ ವಾಚನ ಸ್ಪರ್ಧೆ

*ಸುಳ್ಯದ ಚಂದನ ಸಾಹಿತ್ಯ ವೇದಿಕೆ ಆಯೋಜಿಸಿದ್ದ ಚುಟುಕು ವಾಚನ ಸ್ಪರ್ಧೆಯು ಇತ್ತೀಚಿಗೆ ಅರ್ಥಪೂರ್ಣವಾಗಿ ಜರುಗಿತು . ಕವಿಗೋಷ್ಠಿ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಹಾ ಮ ಸತೀಶ್ ಬೆಂಗಳೂರು ರವರು ವಹಿಸಿದ್ದರು .ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಸಾಹಿತಿಗಳಾದ ಸಾನು (ಸಂಧ್ಯಾ ) ಉಬರಡ್ಕ ಸುಳ್ಯ ರವರು ನೆರವೇರಿಸಿದರು .ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಕೆವಿಜಿ ಪಾಲಿಟೆಕ್ಣಿಕ್ ಕಾಲೇಜಿನ ಉಪನ್ಯಾಸಕರಾದ ವಿಜಯಕುಮಾರ್ ಕಾಣಿಚಾರ್ , ಸುಳ್ಯದ ಮಹಿಳಾ ಸಾಹಿತಿ ಅನುರಾಧಾ ಶಿವಪ್ರಕಾಶ ರವರು ವಹಿಸಿದ್ದರು .ಪ್ರಾಸ್ತಾವಿಕ ಭಾಷಣವನ್ನು ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ಅಧ್ಯಕ್ಷರಾದ ಎಚ್ .ಭೀಮರಾವ್ ವಾಷ್ಠರ್ ಸುಳ್ಯ ರವರು ಮಾಡಿದರು . ಕುಮಾರಿ ಧನ್ವಿ ರೈ ಪಾಣಾಜೆ ಪ್ರಾರ್ಥನೆ ಗೀತೆ ಹಾಡಿದರು .ಸ್ವಾಗತ ಭಾಷಣವನ್ನು ಯುವ ಕವಯಿತ್ರಿ ಶಶಿಕಲಾ ಭಾಕ್ರಬೈಲ್ ರವರು ನಡೆಸಿಕೊಟ್ಟರು .ವಂದನಾರ್ಪಣೆಯನ್ನು ಖ್ಯಾತ ಬರಹಗಾರರಾದ ಅಬೂಬಕರ್ ಅನಿಲಕಟ್ಟೆ ವಿಟ್ಲ ರವರು ಮಾಡಿದರು . ಚುಟುಕು ವಾಚನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಕ್ಕೆ ಸಿಂಧು ಭಾರ್ಗವ ಬೆಂಗಳೂರು ಆಯ್ಕೆ ಆದರು. ದ್ವಿತೀಯ ಬಹುಮಾನಕ್ಕೆ ಹಿತೇಶ್ ಕುಮಾರ್ ಎ ಕಾಸರಗೋಡು ಆಯ್ಕೆಯಾದರು . ತೃತೀಯ ಬಹುಮಾನಕ್ಕೆ ಪರಿಮಳ ಐವರ್ನಾಡು ಸುಳ್ಯ , ಎಂ ಎ ಮುಸ್ತಫಾ ಬೆಳ್ಳಾರೆ ಆಯ್ಕೆಯಾದರು. ಸಮಾಧಾನಕರ ಬಹುಮಾನಗಳಿಗೆ ಶ್ರೀಮತಿ ಸುಕೃತಿ ಅನಿಲ್ ಪೂಜಾರಿ (ಅನಿಕೃತಿ) , ಪೂರ್ಣಿಮಾ ಪೆರ್ಲಂಪಾಡಿ ಪುತ್ತೂರು ಆಯ್ಕೆ ಆದರು.*ಇಂದು ಚಂದನ ಸಾಹಿತ್ಯ ವೇದಿಕೆಯಲ್ಲಿ ನಡೆಯುತ್ತಿರುವ ಚುಟುಕು ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದ ಬೇರೆ ಬೇರೆ ಕಡೆಯಿಂದ 40 ಕ್ಕೂ ಅಧಿಕ ಕವಿಗಳು ಭಾಗವಹಿಸಿದ್ದು ವಿಶೇಷ . ಚುಟುಕು ವಾಚನ ಸ್ಪರ್ಧೆಯಲ್ಲಿ ಕೆ. ಶಶಿಕಲಾ ಭಾಸ್ಕರ್ ದೈಲಾ ಬಾಕ್ರಬೈಲ್ ಕಾಸರಗೋಡು , ಬಿ.ಉದನೇಶ್ವರ್ ಪ್ರಸಾದ್ ಮೂಲಡ್ಕ ಕಾಸರಗೋಡು , ಎಮ್ ಎಸ್ ಉಷಾ ಪ್ರಕಾಶ್ ಮೈಸೂರು , ಪೂರ್ಣಿಮಾ ಕಾರಿಂಜ ಕನಕಮಜಲು , ಬಲ್ಲೇನಹಳ್ಳಿ ಮಂಜುನಾಥ ಕೆ ಆರ್ ಪೇಟೆ , ಅಪ್ಪಯ್ಯ ಯು ಯಾದವ್ ಬೆಂಗಳೂರು , ರತ್ನತನಯ {ನುಗ್ಗಿಹಳ್ಳಿ } ಬೆಂಗಳೂರು , ಶಿವಕುಮಾರ್ ಕೋಡಿಹಾಳ , ನಿರ್ಮಲಾ ಪುತ್ತೂರು, ಡಾ. ಸುರೇಶ ನೆಗಳಗುಳಿ ಮಂಗಳೂರು , ನಾರಾಯಣ್ ನಾಯ್ಕ.ಕುದುಕೋಳಿ, ಶಶಿಧರ್ ಏಮಾಜೆ, ಪೂರ್ಣಿಮಾ ಪೆರ್ಲಂಪಾಡಿ , ನಾರಾಯಣ್ ಕುಂಬ್ರ , ಶ್ರೀಮತಿ ರೇಖಾ ಸುದೇಶ್ ರಾವ್ ಮಂಗಳೂರು, ಮಾನಸ ವಿಜಯ್ ಕೈಂತಜೆ ಮಾಣಿ , ಜ್ಯೋತಿ ಲಕ್ಷ್ಮಿ ಕೂಟೇಲು , ಶ್ರೀಮತಿ ಪಿ ಹೆಗ್ಡೆ , ಡಾ.ವಾಣಿಶ್ರೀ ಕಾಸರಗೋಡು , ಡಾ.ಅನ್ನಪೂರ್ಣ ಹಿರೇಮಠ್ , ಕುಸುಮ್ ಸಾಲಿಯಾನ್ ಪುಣೆ , ಶ್ರೀ ಆನಂದ್ ಹಕ್ಕೆನ್ನವರ , ರಾಜಶೇಖರ್ ಚ ಶೀಲವಂತ ಬೆಂಗಳೂರು , ಸಮ್ಯಕ್ತ್ ಜೈನ್ ಕಡಬ , ವರ್ಷಿಣಿ ರಾಮಚಂದ್ರ , ಶಂಕರಾಂಕ {ಶಂಕರಯ್ಯ ಕವಿತಾಳ}, ಭವಾನಿ ಗೌಡ ಹುಬ್ಬಳ್ಳಿ ಇನ್ನಿತರರು ಭಾಗವಹಿಸಿದ್ದರು .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!