Ad Widget

ಐನೆಕಿದು : ಕೆಸರಲ್ಲಿ ಹೂತು ಹೋದ ಬಸ್ಸಿನ ಚಕ್ರ – ವಿದ್ಯಾರ್ಥಿಗಳ ಪರದಾಟ

ಐನೆಕಿದು ಗ್ರಾಮದ ಕೋಟೆ ಎಂಬಲ್ಲಿ ಸರಕಾರಿ ಬಸ್ಸೊಂದು ಕೆಸರಲ್ಲಿ ಬಾಕಿಯಾದ ಘಟನೆ ಜು.14 ರಂದು ನಡೆದಿದೆ. ಸುಬ್ರಹ್ಮಣ್ಯದಿಂದ ಬಾಳುಗೋಡಿಗೆ ಹೋಗುವ ಬಸ್ಸಿನ ಚಕ್ರ ಕೆಸರಲ್ಲಿ ಹೂತು ಹೋಗಿರುವುದರಿಂದ ಶಾಲಾ ವಿದ್ಯಾರ್ಥಿಗಳು ಪರದಾಡುವಂತಾಯಿತು. ಈ ರಸ್ತೆ ದುರಸ್ತಿ ಕಾಣದೇ ಹಲವಾರು ವರ್ಷಗಳೇ ಕಳೆದಿದೆ. ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.‌

ಚೊಕ್ಕಾಡಿ ವಿದ್ಯಾಸಂಸ್ಥೆಗಳು ಕುಕ್ಕುಜಡ್ಕ : ಸ್ಥಾಪನಾ ದಿನಾಚರಣೆ ಕಾರ್ಯಕ್ರಮ

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಸ್ಥಾಪನಾ ದಿನಾಚರಣೆ ಕಾರ್ಯಕ್ರಮವು ಜು.14ರಂದು ವಿಜೃಂಭಣೆಯಿಂದ ಜರುಗಿತು. ಶಾಲಾ ಆಡಳಿತ ಮಂಡಳಿಯ ಸಂಚಾಲಕರಾಗಿರುವ ಶ್ರೀಯುತ ರಾಧಾಕೃಷ್ಣ ಬೊಳ್ಳೂರುರವರು ಪ್ರಾಸ್ತಾವಿಕ ನುಡಿಗಳೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮೀನುಗಾರಿಕಾ, ಬಂದರು ಮತ್ತು ಒಳನಾಡು ಸಚಿವರಾದ ಶ್ರೀಯುತ ಎಸ್ ಅಂಗಾರ ಅವರು ವಹಿಸಿಕೊಂಡು ಮಾತನಾಡಿ, ಈ ಊರಿನಲ್ಲಿ ಆರಂಭವಾದ...
Ad Widget

ಅಜ್ಜಾವರ : ಕೊಟ್ಟಿಗೆಗೆ ಬೆಂಕಿ ತಗುಲಿ, ಅಪಾರ ನಷ್ಟ

ಅಜ್ಜಾವರ ಗ್ರಾಮದ ಕೆದ್ಕಾರ್ ರಾಮಣ್ಣ ಗೌಡರ ಕೊಟ್ಟಿಗೆಗೆ ಕಳೆದ ರಾತ್ರಿ ಎರಡು ಗಂಟೆ ಸುಮಾರಿಗೆ ಬೆಂಕಿ ತಗುಲಿ ಸಂಗ್ರಹಿಸಿಟ್ಟಿದ್ದ ಅಡಿಕೆ ಬೆಂಕಿಗೆ ಆಹುತಿಯಾಗಿದೆ. ಕೊಟ್ಟಿಗೆಯಲ್ಲಿದ್ದ ಪ್ರಿಡ್ಜ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ತಗುಲಿದೆ ಎಂದು ತಿಳಿದುಬಂದಿದೆ. ಸುಲಿದು ಇಟ್ಟಿದ್ದ ಅಡಿಕೆ ಕೂಡ ಬೆಂಕಿಗೆ ಆಹುತಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಪೋಲೀಸರು, ಕಂದಾಯ ಹಾಗೂ...

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ ವಾಚನ ಸ್ಪರ್ಧೆ

*ಸುಳ್ಯದ ಚಂದನ ಸಾಹಿತ್ಯ ವೇದಿಕೆ ಆಯೋಜಿಸಿದ್ದ ಚುಟುಕು ವಾಚನ ಸ್ಪರ್ಧೆಯು ಇತ್ತೀಚಿಗೆ ಅರ್ಥಪೂರ್ಣವಾಗಿ ಜರುಗಿತು . ಕವಿಗೋಷ್ಠಿ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಹಾ ಮ ಸತೀಶ್ ಬೆಂಗಳೂರು ರವರು ವಹಿಸಿದ್ದರು .ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಸಾಹಿತಿಗಳಾದ ಸಾನು (ಸಂಧ್ಯಾ ) ಉಬರಡ್ಕ ಸುಳ್ಯ ರವರು ನೆರವೇರಿಸಿದರು .ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಕೆವಿಜಿ ಪಾಲಿಟೆಕ್ಣಿಕ್...

ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಆಯ್ಕೆಯಾದ ಡಾ. ಜಯಕರ್ ಅವರನ್ನು ಅಭಿನಂದಿಸಿದ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ

ಕರ್ನಾಟಕ ಸರಕಾರದ ಮಾನ್ಯ ರಾಜ್ಯಪಾಲರಾದ ಶ್ರೀ ತಾವರ್‌ಚಂದ್ ಗೆಹ್ಲೋಟ್ ಇವರಿಂದ ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ನೇಮಕಗೊಂಡ ಡಾ. ಜಯಕರ್ ಅವರನ್ನು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು; ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಇದರ ಪ್ರಧಾನಕಾರ್ಯದರ್ಶಿಗಳಾದ ಡಾ. ರೇಣುಕಾ ಪ್ರಸಾದ್ ಕೆ.ವಿ ಯವರು ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳ ಕಚೇರಿಯಲ್ಲಿ ಕೆ.ವಿ.ಜಿ ಸಮೂಹ ಶಿಕ್ಷಣ ಸಂಸ್ಥೆಗಳ ಪರವಾಗಿ...

ಕೆಂಪೇಗೌಡ ಜಯಂತಿ ಆಚರಣೆಯ ಪ್ರಯುಕ್ತ ರಾಜ್ಯ ಉಪಾಧ್ಯಕ್ಷರಾದ ಡಾ.ರೇಣುಕಾ ಪ್ರಸಾದ್ ಕೆ.ವಿ.ಯವರಿಂದ ಚೆಕ್ ವಿತರಣೆ

ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಒಕ್ಕಲಿಗರ ಯಾನೆಗೌಡರ ಸೇವಾ ಸಂಘಕ್ಕೆ ಮತ್ತು ಉಡುಪಿ ಜಿಲ್ಲಾ ಒಕ್ಕಲಿಗರ ಗೌಡ ಸಂಘಕ್ಕೆ ರಾಜ್ಯ ಒಕ್ಕಲಿಗರ ಸಂಘಉಪಾಧ್ಯಕ್ಷರಾದ ಡಾ.ರೇಣುಕಾಪ್ರಸಾದ್ ಕೆ.ವಿ ಯವರ ಶಿಫಾರಸಿನಂತೆ ಕೆಂಪೇಗೌಡ ಜಯಂತಿಯನ್ನುಆಚರಿಸಲು ರೂ. 25,000/- ಚೆಕ್‌ನ್ನು ವಿತರಿಸಲಾಯಿತು. ದಿನಾಂಕ 13.07.2022ರಂದು ಮಂಗಳೂರಿನ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಸಭಾಂಗಣದಲ್ಲಿ...

ರೋಟರಾಕ್ಟ್ ಜಿಲ್ಲಾ ನಿರ್ದೇಶಕರಾಗಿ ಪಿ.ವಿ.ಸುಬ್ರಮಣಿ

ಪ್ರತಿಷ್ಠಿತ ರೋಟರಾಕ್ಟ್ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯ ಜಿಲ್ಲಾ ನಿರ್ದೇಶಕರಾಗಿ ಕಲ್ಲುಗುಂಡಿಯ ಸುಬ್ರಮಣಿ ಪಿ.ವಿ. 2ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಸಂಸ್ಥೆಯಲ್ಲಿ ದಿವ್ಯಾಂಗ ಚೇತನರ ಅಭಿವೃದ್ಧಿ ಮತ್ತು ಅವಕಾಶ ಕಲ್ಪಿಸಲು ಗುರುತಿಸಲಾದ ಹುದ್ದೆಗೆ ಇವರನ್ನು ನೇಮಕಗೊಳಿಸಲಾಗಿದೆ.

ಗ್ರಾಮಸ್ಥರು ಅಳವಡಿಸಿದ 9 ಬ್ಯಾನರ್ ನದಿಗೆ ಕಿತ್ತೆಸೆದ ಕಿಡಿಗೇಡಿಗಳು – ದೈವದ ಮೊರೆ ಹೋಗಲು ನಿರ್ಧಾರ

ಎಲಿಮಲೆ ಅರಂತೋಡು ರಸ್ತೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಹಲವು ಬಾರಿ ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದರೂ ಆಡಳಿತ ಗಮನಹರಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆಯ 26 ಕಡೆಗಳಲ್ಲಿ ಹಾಕಿದ್ದ ಬ್ಯಾನರ್ ಹಾಕಿದ್ದರು. ಮುಖ್ಯಮಂತ್ರಿಗಳು ಬರುವ ಹಿಂದಿನ ರಾತ್ರಿ 9 ಕಡೆ ಹಾಕಿದ್ದ ಬ್ಯಾನರ್ ಕಳವು ಗೈಯಲ್ಪಟ್ಟಿತ್ತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಬ್ಯಾನರ್ ಕಳುವುಗೈದ ಕಿಡಿಗೇಡಿಗಳ ವಿರುದ್ಧ ದೈವದ ಮೊರೆ ಹೋಗುತ್ತೇವೆ...
error: Content is protected !!