ನವಮಾಸದಿ ಹೊತ್ತು
ನೋವಿನಲ್ಲೂ ನಗುವನ್ನು ಕಂಡು
ತನ್ನ ಗರ್ಭಗುಡಿಯಲ್ಲಿ
ಕರುಳ ಬಳ್ಳಿಯ ಬಂಧಿಯೊಳಗೆ
ದೇವರಂತೆ ಆರಾಧಿಸುತ್ತಾ
ಜನ್ಮ ನೀಡಿದ ಮಹಾಮಾತೆ….. ಅಮ್ಮಾ…..
ಅಮ್ಮಾ…..ಎಂದಾಗ ಓಡಿಬಂದು
ಎದೆಗಪ್ಪಿ ಮುತ್ತುಗಳ ಅರ್ಪಿಸುತ್ತಾ
ತನ್ನೆಲ್ಲ ನೋವುಗಳನ್ನು ಮರೆಸುವ
ಜೀವಾ……ಅಮ್ಮಾ……
ಎಲ್ಲವೂ ಇದ್ದು….. ಒಮ್ಮೊಮ್ಮೆ….
ನಿಮ್ಮ ಮಡಿಲಿನಾಸರೆಗೆ
ತಲೆಯೊಡ್ಡಿ ಮಲಗಬೇಕೆಂದೆನಿಸುವುದು ಅಮ್ಮಾ…
ಅಮ್ಮಾ….ಎಲ್ಲೇ ಇರಿ ಖುಷಿಯಾಗಿರಿ
ನಿಮ್ಮ ಒಳಿತಿಗಾಗಿ ಸದಾ
ಹರಸುತಿಹುದು ಈ ನನ್ನ ಪುಟ್ಟ ಮನಸ್ಸು……
ಶ್ರೀಮತಿ ಸರಿತಾ ಮುರಳಿಕೃಷ್ಣ
ಪಾಲೆಪ್ಪಾಡಿ ಮನೆ