
ಬೆಳ್ಳಾರೆ ಮೆಸ್ಕಾಂ ಶಾಖೆಯ ಐವರ್ನಾಡು ವ್ಯಾಪ್ತಿಯಲ್ಲಿ ಲೈನ್ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನವೀನ್ ಎಂ. ಅವರಿಗೆ ಮೆಸ್ಕಾಂ ಜೆ.ಇ. ಆಗಿ ಮುಂಭಡ್ತಿ ದೊರೆತಿದೆ. ಅವರು ಮಂಗಳೂರಿನ ಕುಲಶೇಖರ ಸೇವಾ ಕೇಂದ್ರಕ್ಕೆ ನಿಯುಕ್ತಿಗೊಂಡಿದ್ದಾರೆ. ಇವರು ಕಳೆದ 15 ವರ್ಷಗಳಿಂದ ಬೆಳ್ಳಾರೆಯಲ್ಲಿ ಲೈನ್ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಚಾಮನಗರದವರು.