ಮಡಪ್ಪಾಡಿಯ ಶ್ರೀ ರಾಮ ಭಜನಾಮಂಡಳಿ ಮತ್ತು ಯುವಕ ಮಂಡಲ ಇವುಗಳ ಆಶ್ರಯದಲ್ಲಿ ಜು.8 ಅಭಿನಂದನಾ ಕಾರ್ಯಕ್ರಮವು ಯುವಕ ಮಂಡಲ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಶಾಲೆಯ ಕಾರ್ಯಾಚಟುವಟಿಕೆಗಳಿಗೆ ತೊಂದರೆ ಉಂಟಾಗುವುದುದನ್ನು ಮನಗಂಡ ಮಡಪ್ಪಾಡಿಯ ಯುವಕ ಮಂಡಲ ಹಾಗೂ ಶ್ರೀ ರಾಮ ಭಜನಾ ಮಂಡಳಿ ಇದರ ಸದಸ್ಯರು ತಾವೇ ಸ್ವತಃ ಹಣ ಹೊಂದಾಣಿಕೆ ಮಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಡಪ್ಪಾಡಿ ಇಲ್ಲಿಗೆ 8000 ಸಾವಿರ ಮೌಲ್ಯದ ಬಿ.ಎಸ್.ಯನ್.ಎಲ್ ಬ್ರಾಡ್ ಬ್ಯಾಂಡ್ ವೈಪೈ ಅಳವಡಿಸಲು ತಗಲುವ ವೆಚ್ಚವನ್ನು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಎಸ್.ಡಿ.ಯಂ.ಸಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
- Tuesday
- December 3rd, 2024