ಮಡಪ್ಪಾಡಿಯ ಶ್ರೀ ರಾಮ ಭಜನಾಮಂಡಳಿ ಮತ್ತು ಯುವಕ ಮಂಡಲದಲ್ಲಿ ಅಭಿನಂದನಾ ಕಾರ್ಯಕ್ರಮ ಯುವಕ ಮಂಡಲ ಸಭಾಂಗಣದಲ್ಲಿ ನಡೆಯಿತು.
ಸಂಜೆ 6 ಗಂಟೆಗೆ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ಪ್ರಾರಂಭವಾಯಿತು, ನಂತರ ಸಭಾ ಕಾರ್ಯಕ್ರಮ 2021-2 ನೇ ಶೈಕ್ಷಣಿಕ ಸಾಲಿನಲ್ಲಿ “ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ”, ಡಿಸ್ಟಿಂಕ್ಷನ್ (ಶೇ. 85)ಗಿಂತ ಹೆಚ್ಚು ಅಂಕಗಳಿಸಿದ ಮಡಪ್ಪಾಡಿ ಗ್ರಾಮ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ನಾನು ಸಾಧಿಸಬೇಕು ಎಂಬ ಛಲವಿದ್ದರೆ ಯಶಸ್ಸು ಸಾಧ್ಯ ಭಜನೆಗಳು ಶಿಕ್ಷಣ ಉತ್ತಮಗೊಳಿಸುವಲ್ಲಿ ಸಹಕರಿಸುತ್ತದೆ ಎಂದು ದಿಕ್ಕೂಚಿ ಭಾಷಣದಲ್ಲಿ ಸುಳ್ಯದ ಕೆ.ವಿ.ಜಿ. ಅಮರ ಜ್ಯೋತಿ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋದಾ ರಾಮಚಂದ್ರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾಗಿ ಮಡಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಮಡಪ್ಪಾಡಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಪಿ.ಸಿ ಜಯರಾಮ, ಮಡಪಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷ ಶಕುಂತಳಾ ಕೇವಳ ಮಡಪ್ಪಾಡಿ ಗ್ರಾಮ ಪಂಚಾಯತ್ ಸದಸ್ಯ ಜಯರಾಮ ಹಾಡಿಕಲ್ಲು, ಯುವಕ ಮಂಡಲ (ರಿ) ಮಡಪ್ಪಾಡಿ ಇದರ ಅಧ್ಯಕ್ಷ ಧನ್ಯಕುಮಾರ್ ದೇರುಮಜಲು, ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷ ಸಚಿನ್ ಬಳ್ಳಡ್ಕ, ಅಭಿನಂದನೆ ಸ್ವೀಕರಿಸಿದ ವಿದ್ಯಾರ್ಥಿಗಳು, ಪದವಿ ಪಡೆದ ಗಣ್ಯರು, ವಿದ್ಯಾಭಿಮಾನಿಗಳ ಯುವಕ ಮಂಡಲ ಹಾಗೂ ಶ್ರೀ ರಾಮ ಭಜನಾ ಮಂಡಳಿಯ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.