ಸುಳ್ಯ ನಗರಪಂಚಾಯತ್ ನಲ್ಲಿ ಕಸ ಸಂಗ್ರಹ ಹಾಗೂ ವಿಲೇವಾರಿ ಘಟಕದಲ್ಲಿ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದ ದುಗಲಡ್ಕದ ನೀರಬಿದಿರೆ ನಿವಾಸಿ ದೇವನಾಥ ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ದೇವನಾಥರಿಗೆ 32 ವರ್ಷ ವಯಸ್ಸಾಗಿತ್ತು.ನಿನ್ನೆ ವಿಷ ಸೇವಿಸಿದರೆನ್ನಲಾಗಿದೆ. ಕೂಡಲೇ ಗೆಳೆಯರಿಗೆ ವಿಷಯ ಗೊತ್ತಾಗಿ ಆಸ್ಪತ್ರೆಗೆ ಕರೆತಂದರು. ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯದಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಕೊನೆಯುಸಿರೆಳೆದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.ಮೃತರು ತಾಯಿ ಸುಂದರಿ, ಸಹೋದರ ವಸಂತ , ಸಹೋದರಿ ಲಕ್ಷ್ಮಿ , ಅತ್ತಿಗೆ ನ.ಪಂ.ಸದಸ್ಯೆ ಶಶಿಕಲಾ ನೀರಬಿದಿರೆಯವರನ್ನು ಅಗಲಿದ್ದಾರೆ.