ಕೇನ್ಯ ಶ್ರೀ ದುರ್ಗಾ ಸೇವಾ ಸಂಘದ “ನಮ್ಮೂರ ಶಾಲೆ ಉಳಿಸಿ ಅಭಿಯಾನಕ್ಕೆ ಓಗೊಟ್ಟು ಮುಂಬಯಿಯ ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್” ಇವರು ಕೇನ್ಯ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಣ್ಕಲ್ ಇಲ್ಲಿನ ಮಕ್ಕಳಿಗೆ ಸಮವಸ್ತ್ರ ಮತ್ತು ನೋಟ್ ಪುಸ್ತಕ ಗಳನ್ನು ಕೊಡುಗೆಯಾಗಿ ನೀಡಲಾಯಿತು.
ಕಣ್ಕಲ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಧರ್ಮಪಾಲ್ ಕಣ್ಕಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕುಸುಮ ಎಸ್ ರೈ ಕೇನ್ಯ ಹೊಸಮನೆ, ದುರ್ಗಾ ಸೇವಾ ಸಂಘದ ಅಧ್ಯಕ್ಷರಾದ ಪದ್ಮನಾಭ ರೈ, ಮಾರುತಿ ಸುಜುಕಿ ಮಂಡೋವಿ ಮೋಟರ್ಸ್ ನ ಸೀನಿಯಾರ್ ಜನರಲ್ ಮ್ಯಾನೇಜರ್ ಪ್ರತಾಪ್ ಕುಮಾರ್ ಶೆಟ್ಟಿ ,ಓಂ ಶಕ್ತಿ ಮಹಿಳಾ ಸಂಸ್ಥೆ ಯ ಸ್ಥಾಪಕಧ್ಯಕ್ಷರಾದ ಚಿತ್ರಾ ಆರ್ ಶೆಟ್ಟಿ, ಅಧ್ಯಕ್ಷರಾದ ಸುಚಿತಾ ಜೆ ಶೆಟ್ಟಿ, ಉಪಾಧ್ಯಕ್ಷರಾದ ಜಯಶ್ರೀ ಕೆ ಶೆಟ್ಟಿ, ಜಂಟಿ ಕಾರ್ಯದರ್ಶಿ ಯಶೋಧಾ ಎಸ್ ಶೆಟ್ಟಿ, ಸದಸ್ಯರಾದ ಶ್ವೇತಾ ಎಸ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ ಮತ್ತು ಎಸ್.ಡಿ.ಎಂ.ಸಿ ಯವರಿಂದ ಓಂ ಶಕ್ತಿ ಮಹಿಳಾ ಸಂಸ್ಥೆ ಯವರನ್ನು ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು ಮತ್ತು ದುರ್ಗಾ ಸೇವಾ ಸಂಘದ ಅಧ್ಯಕ್ಷ ಪದ್ಮನಾಭ ರೈ ಮತ್ತು ಕಳೆದ ಹಲವು ವರ್ಷಗಳಿಂದ ತಮ್ಮ ತಂದೆ ದಿ. ಕೇನ್ಯ ಹೊಸಮನೆ ವಿಠ್ಠಲ ರೈ ಸ್ಮರಣಾರ್ಥವಾಗಿ ಉಚಿತವಾಗಿ ನೋಟ್ ಪುಸ್ತಕ ನೀಡುತ್ತಿರುವ ದೇವಿಪ್ರಸಾದ್ ರೈ ಗೆಜ್ಜೆ ಇವರನ್ನು ಗೌರವಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಸ್ವಾಗತಿಸಿ, ಸಹಶಿಕ್ಷಕಿ ಕು. ಶೋಭಲತಾ ವಂದಿಸಿದರು. ದೇವಿಪ್ರಸಾದ್ ರೈ ಗೆಜ್ಜೆ ಕಾರ್ಯಕ್ರಮ ನಿರೂಪಿಸಿದರು.