- Saturday
- May 17th, 2025
ಕೊಡಗು ಹಾಗೂ ದಕ್ಷಿಣ ಕನ್ನಡ ಗಡಿ ಭಾಗದಲ್ಲಿ ನಿರಂತರ ಕಂಪನ ಸಂಭವಿಸುತ್ತಿದ್ದು ಜು.3 ರಂದು ರಾತ್ರಿ 9.18 ಕ್ಕೆ ಭೂಮಿ ಕಂಪಿಸಿದೆ. ಮೊದಲಿಗೆ ಶಬ್ಧ ಹಾಗೂ ನಂತರ ಸಣ್ಣ ಮಟ್ಟಿನ ಕಂಪನ ಆಗಿದೆ ಎಂದು ಚೆಂಬು ನಿವಾಸಿಗಳು ಮಾಹಿತಿ ನೀಡಿದ್ದಾರೆ. ಹಿಂದಿನ ಕಂಪನಗಳಿಗೆ ಹೋಲಿಸಿದರೆ ಇದು ಲಘು ಪ್ರಮಾಣದಲ್ಲಿತ್ತು ಎನ್ನಲಾಗಿದೆ.

ನಡುಗಲ್ಲು ಹರಿಹರಪಲ್ಲತ್ತಡ್ಕ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ತಡೆ ಉಂಟಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಸಂಚಾರಕ್ಕೆ ಅಡಚಣೆಯಾಗಿದ್ದು ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ.

ಕರ್ನಾಟಕದ ಪ್ರತಿಷ್ಠಿತ ರಂಗ ಶಿಕ್ಷಣ ಕೇಂದ್ರವಾಗಿರುವ ನೀನಾಸಂ ನ 2022-23 ನೇ ಸಾಲಿನ ರಂಗಪದವಿ ವಿದ್ಯಾರ್ಥಿನಿಯಾಗಿ, ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಸುಳ್ಯದ ಪ್ರತಿಭೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ರಾಜ್ಯಾದ್ಯಂತ ನಡೆಸಿದ ರಂಗ ಪಯಣದ ಸಾಹೇಬ್ರು ಬಂದವೇ ನಾಟಕದ ಮುಖ್ಯ ನಟಿ ಕುಮಾರಿ ಮಮತಾ ಕಲ್ಮಕಾರು ಇವರು ಆಯ್ಕೆ ಆಗಿರುತ್ತಾರೆ.ಮಮತಾರವರು ಅರೆಭಾಷೆ...