Ad Widget

ರಾಜ್ಯ ಮಟ್ಟದ ಜಂಗಮ ಶೆಟ್ಟಿ ರಂಗ ಪ್ರಶಸ್ತಿಗೆ ರಂಗಕರ್ಮಿ ಜೀವನರಾಂ ಸುಳ್ಯ ಆಯ್ಕೆ

ಕಲಬುರಗಿ ರಂಗ ಸಂಗಮ ಕಲಾವೇದಿಕೆಯು ಕಳೆದ 9 ವರ್ಷಗಳಿಂದ ನೀsಡುತ್ತಾ ಬಂದಿರುವ ಎಸ್.ಬಿ.ಜಂಗಮಶೆಟ್ಟಿ ರಾಜ್ಯ ಮಟ್ಟದ ರಂಗ ಪ್ರಶಸ್ತಿಗೆ ಹಿರಿಯ ರಂಗಕರ್ಮಿ, ರಂಗಮಾಂತ್ರಿಕ ಜೀವನರಾಂ ಸುಳ್ಯರನ್ನು ಆಯ್ಕೆಯಾಗಿದ್ದಾರೆ.ಪ್ರಶಸ್ತಿ ಆಯ್ಕೆಗಾಗಿ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ್ ಮಾಸ್ತರ್ ಅಧ್ಯಕ್ಷತೆಯಲ್ಲಿ, ಹಿರಿಯ ರಂಗಕರ್ಮಿ ಎಚ್.ಎಸ್. ಬಸವಪ್ರಭು, ಶಾಂತಾ ಕುಲಕರ್ಣಿ, ಸಾಹಿತಿ ಬಿ.ಎಚ್.ನಿರಗುಡಿ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್, ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಮೊದಲಾದವರು ಇದ್ದರು ಎಂದು ರಂಗಸಂಗಮ ವೇದಿಕೆಯ ಪ್ರಧಾನ ಕಾರ್ಯದರ್ಶಿ ಡಾ.ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ. ಜೀವನರಾಂ ಸುಳ್ಯ ಅವರು, ನೀನಾಸಂ ರಂಗ ಪದವೀಧರರು. ತಮ್ಮ ಅದ್ಭುತ ಕ್ರಿಯಾಶೀಲತೆಯಿಂದ ನಾಡಿನ ರಂಗಾಸಕ್ತರ ಗಮನ ಸೆಳೆದಿರುವ ಅವರು, ಮಕ್ಕಳ ಮತ್ತು ಕಾಲೇಜು ರಂಗಭೂಮಿ, ಜಾನಪದ, ಯಕ್ಷಗಾನ, ಬೀದಿ ನಾಟಕಗಳು ಸೇರಿದಂತೆ ನೂರಾರು ನಾಟಕಗಳನ್ನು ನಿರ್ದೇಶಿಸಿ, ನಾಡಿನಾದ್ಯಂತ ಪ್ರದರ್ಶಿಸಿದ್ದಾರೆ. ರಂಗಮಾಂತ್ರಿಕ,ರಂಗದಶಾವತಾರಿ,ಆರ್ಯಭಟ ಮುಂತಾದ ಪ್ರತಿಷ್ಠಿತ ಪ್ರಶಸ್ತಿ ಪಡೆದವರು. ತನ್ನ ವಾಸದ ಮನೆಯನ್ನೇ ಸಾಂಸ್ಕೃತಿಕ ಕಲಾ ಕೇಂದ್ರವಾಗಿ ಪರಿವರ್ತಿಸಿದ ಅಪರೂಪದ ರಂಗಕರ್ಮಿಯಾಗಿದ್ದಾರೆ. ರಂಗ ಸಮಾಜದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಜೀವನರಾಂ ಅವರನ್ನು ಕರ್ನಾಟಕ ಸರ್ಕಾರ ಇದೀಗ ನೂತನವಾಗಿ ಸ್ಥಾಪಿಸಿದ ಕಾರ್ಕಳದ ಯಕ್ಷ ರಂಗಾಯಣ ನಿರ್ದೇಶಕರನ್ನಾಗಿ ನೇಮಕ‌ ಮಾಡಿದೆ.

. . . . . . .

ಜು.18 ರಂದು ಪ್ರಶಸ್ತಿ ಪ್ರದಾನ

ಜುಲೈ 18 ರಂದು ಕಲಬುರಗಿ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಆಯೋಜಿಸಲಾಗುವ ಸಮಾರಂಭದಲ್ಲಿ ರೂ. 10 ಸಾವಿರ ನಗದು,  ಪ್ರಶಸ್ತಿ ಪತ್ರ,  ಶಾಲು, ಸ್ಮರಣಿಕೆ ನೀಡಿ  ಗೌರವಿಸಲಾಗುವುದು ಎಂದು ಡಾ. ಸುಜಾತ ಜಂಗಮಶೆಟ್ಟಿ ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!