ತಾಲೂಕಿನ ವಿವಿಧ ಭಾಗಗಳಲ್ಲಿ ಒಂದು ವಾರದೊಳಗೆ ಐದು ಬಾರಿ ಭೂಕಂಪನದ ಅನುಭವವಾಗಿದ್ದು ಮತ್ತು ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುವ ಬಗ್ಗೆ ಹವಮಾನ ಇಲಾಖೆಯ ಮುನ್ನೆಚ್ಚರಿಕೆಯ ಭಾಗವಾಗಿ ಎಸ್‌ಡಿಪಿಐ ಸಂಪಾಜೆ ಗ್ರಾಮ ಸಮಿತಿ ವತಿಯಿಂದ ರೆಸ್ಕ್ಯೂ ತಂಡವನ್ನು ರಚಿಸಲಾಯಿತು.ಇದರ ಭಾಗವಾಗಿ ಸ್ವಯಂ ಸೇವಕರಿಗೆ ತುರ್ತು ಸಂದರ್ಭದಲ್ಲಿ ಮಾಡಬೇಕಾದ ಕಾರ್ಯಗಳ ಬಗ್ಗೆ ವಿಸ್ಕೃತವಾಗಿ ತಿಳಿಸಿಕೊಡಲಾಯಿತು. ಹಾಗೂ ಯಾವುದೇ ಸಂದರ್ಭದಲ್ಲೂ ತುರ್ತು ಕಾರ್ಯಾಚರಣೆಗೆ ಸನ್ನದ್ಧತೆಯಲ್ಲಿ ಇರುವಂತೆ ನಿರ್ದೇಶಿಸಲಾಯಿತು.ಈ ಸಭೆಯಲ್ಲಿ ಸುಳ್ಯ ಬ್ಲಾಕ್ ಉಪಾಧ್ಯಕ್ಷರಾದ ಸಲೀಂ ದರ್ಕಾಸ್, ಸಂಪಾಜೆಗ್ರಾಮ ಸಮಿತಿ ಕಾರ್ಯದರ್ಶಿ ಶರೀಫ್ ಸೆಟ್ಯಡ್ಕ, ಕಡೆಪಾಲ ಬೂತ್ ಅಧ್ಯಕ್ಷ ಸಾಜಿದ್ ಐ.ಜಿ , ಅಡ್ವಕೇಟ್ ರಶೀದ್, ಫಾರೂಕ್ ಕಾನಕ್ಕೋಡ್, ಅಮೀರುದ್ದೀನ್, ಸಿದ್ದೀಕ್ ಮೂಲೆ ಹಾಗೂ ಮರ್ಝೂಖ್ ಕಡೆಪಾಲ ಉಪಸ್ಥಿತರಿದ್ದರು.
- Friday
- November 1st, 2024