
ರಾಜಸ್ಥಾನದ ಉದಯಪುರ ಎಂಬಲ್ಲಿ ನಡೆದ ಟೈಲರ್ ಕನ್ನಯ್ಯ ಲಾಲ್ ರವರ ಭೀಕರ ಹತ್ಯೆಯನ್ನು ಖಂಡಿಸಿ ಸುಳ್ಯ ವಿಶ್ವ ಹಿಂದೂ ಪರಿಷದ್, ಬಜರಂಗದಳ ಪ್ರಖಂಡದ ವತಿಯಿಂದ ಪ್ರತಿಭಟನಾ ಸಭೆಯು ಸುಳ್ಯ ತಾಲೂಕು ಕಛೇರಿ ಮುಂಭಾಗದಲ್ಲಿ ಜೂ.30 ರಂದು ನಡೆಯಿತು. ಬಳಿಕ ಸೇರಿದ ಸಂಘಟನೆಯ ಕಾರ್ಯಕರ್ತರು ತಹಶಿಲ್ದಾರರ ಮುಖಾಂತರ ಹತ್ಯೆಗೈದ ಕೊಲೆಗಡುಕರಿಗೆ ತಕ್ಕ ಶಿಕ್ಷೆ ವಿಧಿಸುವಂತೆ ರಾಷ್ಟ್ರಪತಿಯವರಿಗೆ ಮನವಿಯನ್ನು ಸಲ್ಲಿಸಿದರು.