Ad Widget

ಫ್ಯಾಷನ್ ವೆಂಚರ್ ಪಾಲುದಾರಿಕೆಯ ‘ಗೋಕುಲಂ ಕಿಡ್ಸ್ ವೇರ್’ ಶುಭಾರಂಭ ; ವೃತ್ತಿಯ ಬಗ್ಗೆ ಕೀಳರಿಮೆಯಾಗದೆ ಅಭಿಮಾನ ಗೌರವವಿರಲಿ – ಸಚಿವ ಅಂಗಾರ

ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್‌ನಲ್ಲಿ ಫ್ಯಾಷನ್ ವೆಂಚರ್ ಪಾಲುದಾರಿಕೆಯ 'ಗೋಕುಲಂ ಕಿಡ್ಸ್ ವೇರ್' ಮಕ್ಕಳ ಉಡುಪುಗಳ ಮಳಿಗೆ ಶುಭಾರಂಭ ಗೊಂಡಿತ್ತು. ಮಳಿಗೆಯನ್ನು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಉದ್ಘಾಟಿಸಿ ಮಾತನಾಡಿದರು.ಅವರು ವ್ಯಾಪಾರ ಮಾಡುವವರಿಗೆ, ಹೂಡಿಕೆದಾರರಿಗೆ, ಸ್ವ ಉದ್ಯೋಗ ಮಾಡುವವರಿಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು. ಆಗ ಮಾತ್ರ ಸ್ವಾವಲಂಬನೆ, ಉದ್ಯೋಗ ಸೃಷ್ಠಿ ಮತ್ತು...

ವಿರಾಟ್ ಫ್ರೆಂಡ್ಸ್(ರಿ.)ಬೆಳ್ಳಾರೆ ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ

ವಿರಾಟ್ ಫ್ರೆಂಡ್ಸ್(ರಿ.)ಬೆಳ್ಳಾರೆ ಇದರ ವಾರ್ಷಿಕ ಮಹಾಸಭೆಯು ಮೇ.20ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಿರಾಟ್ ಫ್ರೆಂಡ್ಸ್(ರಿ.)ಬೆಳ್ಳಾರೆ ಅಧ್ಯಕ್ಷ ಸಚಿನ್ ರೈ ಪೂವಾಜೆ ವಹಿಸಿದ್ದರು. ಈ ಸಂದರ್ಭದಲ್ಲಿ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ಮನೋಜ್ ಶೆಟ್ಟಿ ಬೆಳ್ಳಾರೆ, ಕಾರ್ಯದರ್ಶಿಯಾಗಿ ಧೀರಜ್. ಪಿ, ಕೋಶಾಧಿಕಾರಿಯಾಗಿ ಪ್ರದೀಪ್ ಬೆಳ್ಳಾರೆ ಇವರುಗಳು ಅವಿರೋಧವಾಗಿ ಆಯ್ಕೆಯಾದರು.
Ad Widget

ಕು|ಹರ್ಷಿತಾ.ಟಿ ರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 552 ಅಂಕ

ಬೆಳ್ಳಾರೆ ಶ್ರೀ ಸುಬ್ರಹ್ಮಣ್ಯೇಶ್ವರ ಮೋಟಾರ್ ವರ್ಕ್ಸ್ ನ ಮಾಲಕರಾದ ಶ್ರೀ ತಿರುಮಲೇಶ್ವರ ಕುಲಾಲ್ ಹಾಗೂ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಶ್ರೀಮತಿ ಕೆ.ಸಿ.ಬೇಬಿ ದಂಪತಿಗಳ ಪುತ್ರಿ ಕು|ಹರ್ಷಿತಾ.ಟಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 552 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಪುತ್ತೂರು ತಾಲೂಕಿನ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ.

ಎಸ್.ಎಸ್.ಎಲ್.ಸಿ ಫಲಿತಾಂಶ : ಕೊಲ್ಲಮೊಗ್ರು ಕೆ.ವಿ.ಜಿ ಅನುದಾನಿತ ಪ್ರೌಢಶಾಲೆಗೆ ಶೇ.75 ಫಲಿತಾಂಶ

2021-22ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು, ಕೊಲ್ಲಮೊಗ್ರು ಕೆ.ವಿ.ಜಿ ಅನುದಾನಿತ ಪ್ರೌಢಶಾಲೆ ಶೇ.75 ಫಲಿತಾಂಶ ದಾಖಲಿಸಿದೆ.32 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 24 ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.4 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 1 ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವರದಿ :- ಉಲ್ಲಾಸ್ ಕಜ್ಜೋಡಿ

ನಾಲ್ಕೂರು ಹಾಲೆಮಜಲಿನ ಕು. ಭುವಿತ ಪಿ ಬಿ ರಿಗೆ ಎಸ್ಸೆಸ್ಸೆಲ್ಸಿಯಲ್ಲಿ 576 ಅಂಕ

ಗುತ್ತಿಗಾರು ಗ್ರಾಮ ಪಂಚಾಯತಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ಕಾವೇರಿ ಕೋಂ ಭರತ್ ಹಾಲೆಮಜಲು ನಾಲ್ಕೂರು ಇವರ ಪುತ್ರಿ ಕು. ಭುವಿತ ಪಿ ಬಿ ಇವರು 576 ಅಂಕ ಗಳಿಸಿರುತ್ತಾರೆ. ಎಲಿಮಲೆ ಪ್ರೌಢಶಾಲಾ ವಿದ್ಯಾರ್ಥಿಯಾಗಿರುವ ಇವರಿಗೆ ಕಂಪ್ಯೂಟರ್ ಸೈನ್ಸ್ ನಲ್ಲಿ ಆಸಕ್ತಿ ಇದ್ದು, ಪಿಸಿಎಂಸಿ ಯಲ್ಲಿ ಪದವಿ ಮಾಡಬೇಕು ಎಂಬ ಆಸೆ ಇದೆ.

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ: ಎಸೆಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದ ಪ್ರದೀಪ್ ಟಿ ರಾಜ್ಯಕ್ಕೆ ದ್ವಿತೀಯ ಸ್ಥಾನಿ

ಪ್ರದೀಪ್ ಟಿ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಿಂದ 86 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 15 ಡಿಸ್ಟಿಂಕ್ಷನ್,38 ಪ್ರಥಮ ದರ್ಜೆ, 11 ದ್ವಿತೀಯ ದರ್ಜೆಯೊಂದಿಗೆ 71 ಮಂದಿ ಉತ್ತೀರ್ಣರಾಗಿ ಶೇಕಡಾ 82.6 ಫಲಿತಾಂಶ ದಾಖಲಾಗಿದೆ. ಪ್ರದೀಪ್ ಟಿ 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಇವರು ಬಾಳಿಲ ತೋಟ ಮನೆ...

ಎಸ್.ಎಸ್.ಎಲ್.ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಸಾತ್ವಿಕ್.ಹೆಚ್.ಎಸ್ ಗೆ ಗಣಿತ ಸಂಶೋಧಕನಾಗುವ ಆಸೆ

ಈ ಸಲದ ಎಸ್.ಎಸ್.ಎಲ್.ಸಿ ಫಲಿತಾಂಶ ಹೊರಬಿದ್ದಿದ್ದು ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆ.ಪಿ.ಎಸ್) ಬೆಳ್ಳಾರೆಯ ವಿದ್ಯಾರ್ಥಿಯಾದ ಸಾತ್ವಿಕ್.ಹೆಚ್.ಎಸ್ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಮೂಡಿಬಂದಿದ್ದಾರೆ. ಅಮರಸುದ್ದಿಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿ ಸಾತ್ವಿಕ್.ಹೆಚ್.ಎಸ್ ಭವಿಷ್ಯದಲ್ಲಿ ಗಣಿತ ಸಂಶೋಧಕನಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಕಳಂಜ ಗ್ರಾಮದ ಕಜೆಮೂಲೆ ಡಾ.ಶಶಿಧರ್.ಹೆಚ್.ಎಸ್ ಹಾಗೂ ಡಾ.ಅನುಪಮಾ ಶಶಿಧರ್ ದಂಪತಿಗಳ ಸುಪುತ್ರರಾಗಿರುವ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಶೇಣಿ, ಚೊಕ್ಕಾಡಿ ಭಗವಾನ್...

ಎಲಿಮಲೆ ಜ್ಞಾನದೀಪ ಶೇ.96 ಫಲಿತಾಂಶ – 623 ಅಂಕ ಪಡೆದ ಭವಿತ್ ಬಾಳುಗೋಡು

ಎಲಿಮಲೆ ಜ್ಞಾನದೀಪ ವಿದ್ಯಾ ಸಂಸ್ಥೆ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.96 ಫಲಿತಾಂಶ ದಾಖಲಿಸಿದೆ. ಒಟ್ಟು 25 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 24 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 15 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಮತ್ತು 9 ವಿದ್ಯಾರ್ಥಿ ಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಭವಿತ್ ಜಿ. ಬಾಳುಗೋಡು 625ರಲ್ಲಿ 623 ಅಂಕ ಪಡೆದು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಬೆಳ್ಳಾರೆ ಪಬ್ಲಿಕ್ ಸ್ಕೂಲ್ ನ ಸಾತ್ವಿಕ್ ಹೆಚ್.ಎಸ್. ರಾಜ್ಯಕ್ಕೆ ಪ್ರಥಮ- ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಅಂಕ

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಸಾತ್ವಿಕ್ ಹೆಚ್.ಎಸ್. ಈ ಬಾರಿಯ ಎಸ್ .ಎಸ್.ಎಲ್.ಸಿ. ಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.

ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ : 85.63% ವಿದ್ಯಾರ್ಥಿಗಳು ಉತ್ತೀರ್ಣ – ಹುಡುಗಿಯರೇ ಮೇಲುಗೈ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫ‌ಲಿತಾಂಶ ಗುರುವಾರ ಮಧ್ಯಾಹ್ನ 12.30ಕ್ಕೆ ಹೊರ ಬಿದ್ದಿದೆ. 85.63% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಬಾರಿ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಹುಡುಗರು 81.30 % ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ 8 ಲಕ್ಷದ 53 ಸಾವಿರದ 436 ವಿದ್ಯಾರ್ಥಿಗಳ ಪೈಕಿ, ಈ ಬಾರಿ 7 ಲಕ್ಷದ 30 ಸಾವಿರದ 881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 145 ವಿದ್ಯಾರ್ಥಿಗಳು...
Loading posts...

All posts loaded

No more posts

error: Content is protected !!