- Thursday
- November 21st, 2024
ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲುವಿನಲ್ಲಿ ಮೇ.01 ಮತ್ತು 02 ರಂದು ಶಿರಾಡಿ ಹಾಗೂ ಉಪ ದೈವಗಳ ನೇಮ ನಡಾವಳಿ ನಡೆಯಿತು.ಮೇ.01 ರಂದು ಶ್ರೀ ದೈವದ ಭಂಡಾರ ಬಂದು, ಮೇ.02 ರಂದು ಶಿರಾಡಿ ಹಾಗೂ ಉಪ ದೈವಗಳ ನೇಮೋತ್ಸವ ನಡೆಯಿತು. ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ವರದಿ :- ಉಲ್ಲಾಸ್ ಕಜ್ಜೋಡಿ
ಆಲೆಟ್ಟಿ ಗ್ರಾಮದ ನಾಗಪಟ್ಟಣ ಸೇತುವೆ ಕಾಮಗಾರಿ ತುರ್ತಾಗಿ ದುರಸ್ತಿ ಪಡಿಸುವಂತೆ ಆಗ್ರಹಿಸಿ ಪಂಚಾಯತ್ ಸದಸ್ಯ ಧರ್ಮಪಾಲ ಕೊಯಿಂಗಾಜೆ ಯವರ ನೇತೃತ್ವದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರಿಗೆ ಕೆಲ ದಿನಗಳ ಹಿಂದೆ ಮನವಿ ಸಲ್ಲಿಸಿದ್ದರು. ಇಲಾಖೆಯ ಅಭಿಯಂತರರಾದ ಲೋಕೇಶ್ ಮತ್ತು ಪರಮೇಶ್ವರ ರವರು ಎ.29 ರಂದು ಸ್ಥಳಕ್ಕೆ ಭೇಟಿ ನೀಡಿ ಸೇತುವೆಯ ಕಾಮಗಾರಿ ಕುರಿತು ಪರಿಶೀಲನೆ ನಡೆಸಿ...
ಕಳಂಜ ಗ್ರಾಮ ಪಂಚಾಯತ್ ನ ಪಂಚಮಿ ಸಂಜೀವಿನಿ ಒಕ್ಕೂಟ ಕಳಂಜ ಇದರ ಸದಸ್ಯರು ಒಟ್ಟಾಗಿ "ಕಾಯಕ ಶಕ್ತಿ" ಎಂಬ ತಂಡದೊಂದಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಳಂಜ ಗ್ರಾಮದ ತಂಟೆಪ್ಪಾಡಿ -ಕಳಂಜ ತೋಡಿನ ಹೂಳೆತ್ತುವ ಕೆಲಸವನ್ನು ಲೋಕೇಶ್ ತಂಟೆಪ್ಪಾಡಿಯವರ ಮನೆಯ ಸಮೀಪದಿಂದ ಮೇ. 02ರಂದು ಆರಂಭಿಸಲಾಯಿತು. ತಂಡದಲ್ಲಿ ಗ್ರಾಮ ಪಂಚಾಯಿತಿ ಸಂಜೀವಿನಿ...
ಸುಳ್ಯದಲ್ಲಿ ಉದ್ಯಮದ ಜತೆಗೆ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ ಅವರಿಗೆ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರು ಸುಳ್ಯದಲ್ಲಿ ಸ್ವಾತಿ ಲಾಡ್ಜ್ ಹಾಗೂ ಸ್ವಾತಿ ನರ್ಸರಿ ಪ್ರಾರಂಭಿಸಿ ಯಶಸ್ಸು ಗಳಿಸಿದ ಇವರು ಕಾಂತಮಂಗಲದ ಶ್ರೀ ರಾಘವೇಂದ್ರ ಮಠದ ಆಡಳಿತ ಸಮಿತಿ ಅಧ್ಯಕ್ಷ ಹಾಗು ಬೃಂದಾವನ ಸೇವಾ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಸೇವೆ ಸಲ್ಲಿಸುತ್ತಿದ್ದಾರೆ....
ಕುಂಬ್ರಚೋಡು ಮೋಹಿಯುದ್ದಿನ್ ಜುಮಾ ಮಸೀದಿಯಲ್ಲಿ ಈದ್ ಹಬ್ಬ ಆಚರಣೆ ಇಂದು ನಡೆಯಿತು. ಮಸೀದಿಯ ಖತೀಬರಾದ ಅಶ್ರಫ್ ಮುಸ್ಲಿಯಾರ್ ರವರು ಈದ್ ನಮಾಜ್ ಗೆ ನೇತೃತ್ವ ನೀಡಿ ಸರ್ವರಲ್ಲಿಯೂ ಪ್ರೀತಿ ಗೌರವ ವಿಶ್ವಾಸದೊಂದಿಗೆ ಬದುಕು ಎಂಬ ಸಂದೇಶದೊಂದಿಗೆ ನಾಡಿನ ಜನತೆಗೆ ಈದ್ ಹಬ್ಬದ ಶುಭಾಶಯ ಹಾಗೂ ದುವಾ ನೆರವೇರಿಸಿದರು. ಈ ಸಂದರ್ಭದಲ್ಲಿ ಅಬ್ದುಲ್ ಸಲಾಂ ಉಸ್ತಾದ್ ಜಮಾಯತ್...
ಕ್ಯಾಂಪ್ಕೋ ಸಂಸ್ಥೆ , ಮಂಗಳೂರು ಇದರ ವತಿಯಿಂದ "ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ" ಎಂಬ ಯೋಜನೆಯಡಿಯಲ್ಲಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರ ಕಾರ್ಯಕ್ರಮವು ಮೇ.02ರಂದು ಅಲಂಕಾರು ಕ್ಯಾಂಪ್ಕೋ ಶಾಖೆಯಲ್ಲಿ ನಡೆಯಿತು. ಕ್ಯಾಂಪ್ಕೋ ಸದಸ್ಯರಾದ ಪುರುಷೋತ್ತಮ ಗೌಡ ಬಲ್ಯ ಇವರ ಅಂಜಿಯೋಪ್ಲಾಸ್ಟಿ ಚಿಕಿತ್ಸೆಗಾಗಿ ಕ್ಯಾಂಪ್ಕೋ ವತಿಯಿಂದ ನೀಡಲಾದ ರೂ. 50000/- ಚೆಕ್ ನ್ನು ಸಂಸ್ಥೆಯ ನಿರ್ದೇಶಕ ಕೃಷ್ಣ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ಸೀತಾರಾಮ್ ಕಾನಾವು ಅವರಿಗೆ ದೊಡ್ಡತೋಟಕ್ಕೆ ವರ್ಗಾವಣೆ ಆಗಿದ್ದು, ಮೇ.02 ರಂದು ಬೀಳ್ಕೊಡುಗೆ ಸಮಾರಂಭ ನಡೆಯಿತು.ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ನಾಗೇಶ್, ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ವಿಮಲಾ ರಂಗಯ್ಯ, ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ...
ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಹಾಗೂ ಹರಿಹರ ಪಲ್ಲತ್ತಡ್ಕ ಸ.ಪ.ಪೂ ಕಾಲೇಜು ಪ್ರೌಢಶಾಲಾ ವಿಭಾಗದ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಎ.29 ರಂದು ಹರಿಹರ ಪಲ್ಲತ್ತಡ್ಕ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡುವ ಕಾರ್ಯಕ್ರಮ ನಡೆಯಿತು.ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಶಿಕ್ಷಣವನ್ನು ಹರಿಹರ ಪಲ್ಲತ್ತಡ್ಕ ಪ್ರೌಢಶಾಲೆಯಲ್ಲಿ ಕೊಡಿಸುವಂತೆ ವಿನಂತಿಸಲಾಗಿದ್ದು, ಉತ್ತಮ...