- Thursday
- November 21st, 2024
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಸಂಪಾಜೆ ಸುಳ್ಯ ಇವರ ಆಶ್ರಯದಲ್ಲಿ ಮೇ.5 ರಂದು ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಕೊಡಗು ಕೆನರಾ ಬಂಡಾಯ 1837 ಕೃತಿ ಲೋಕಾರ್ಪಣೆ ಸದಸ್ಯತ್ವ ಅಭಿಯಾನಕ್ಕೆ ಚಾಲನೆ, ನೂತನ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮ ಸುಳ್ಯದ ಕನ್ನಡ ಭವನ ಅಂಬೆಟಡ್ಕದಲ್ಲಿ...
ಕಲ್ಮಕಾರು ಗ್ರಾಮದ ಕೋನಡ್ಕ ಮನೆ ಶ್ರೀಮತಿ ಕಮಲಾಕ್ಷಿ ಮತ್ತು ಶ್ರೀ ಗಿರಿಯಪ್ಪ ಗೌಡರ ಪುತ್ರ ಹಿತೇಶ್ ರವರ ವಿವಾಹವು ನಾಲ್ಕೂರು ಗ್ರಾಮದ ಕೊಲ್ಯಮನೆ ಶ್ರೀಮತಿ ಮೀನಾಕ್ಷಿ ಮತ್ತು ಶ್ರೀ ತಿರುಮಲೇಶ್ವರ ಗೌಡರ ಪುತ್ರಿ ಚೈತ್ರಾ ರವರೊಂದಿಗೆ ಮೇ.04 ರಂದು ಕೊಲ್ಲಮೊಗ್ರು ಶ್ರೀ ಮಯೂರ ಕಲಾಮಂದಿರದಲ್ಲಿ ನಡೆಯಿತು. ವರದಿ :- ಉಲ್ಲಾಸ್ ಕಜ್ಜೋಡಿ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಜನರ ಕುಂದು-ಕೊರತೆಗಳನ್ನು ಈಡೇರಿಸುವ ಸಲುವಾಗಿ ಜನಸ್ಪಂದನ ಕಾರ್ಯಕ್ರಮ ಮೇ.06ರಂದು ಬೆಳಗ್ಗೆ 10.00ರಿಂದ ಮಧ್ಯಾಹ್ನ 1.00 ಗಂಟೆಯ ತನಕ ಜರುಗಲಿದೆ. ಈ ಕಾರ್ಯಕ್ರಮದ ನೇತೃತ್ವವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ದ.ಕ. ಜಿಲ್ಲಾಧ್ಯಕ್ಷರಾದ ಅಲೆಕ್ಸಾಂಡರ್ ಡಿಸೋಜ, ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾದ ಸದಾಶಿವ ಪೂಜಾರಿಯವರು ವಹಿಸಲಿದ್ದಾರೆ.
ಗುತ್ತಿಗಾರು ಗ್ರಾಮದ ಅಡ್ಡನಪಾರೆ ನಿವಾಸಿ ಕಕ್ಯಾನ ಗುಡ್ಡೆಮನೆ ಶ್ರೀಮತಿ ಜಲಜಾಕ್ಷಿ ಮತ್ತು ಮಾಯಿಲಪ್ಪ ಗೌಡರ ಪುತ್ರಿ ಉಷಾಳ ವಿವಾಹವು ಗುತ್ತಿಗಾರು ಗ್ರಾಮದ ಪೈಕ ಗುಡ್ಡೆಮನೆ ಶ್ರೀಮತಿ ಜಾನಕಿ ಮತ್ತು ದಿ. ತಿಮ್ಮಪ್ಪ ಗೌಡರ ಪುತ್ರ ತೇಜಕುಮಾರ ರೊಂದಿಗೆ ಮೇ. 4 ರಂದು ಹಾಲೆಮಜಲು ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು.
ಪುತ್ತೂರು ಸಿಟಿ ಆಸ್ಪತ್ರೆ ಬಳಿ ಕಾರ‍್ಯಾಚರಿಸುತ್ತಿರುವ ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯ 21 ವಿದ್ಯಾರ್ಥಿಗಳು ಎಪ್ರಿಲ್ 10 ರಂದು ನಡೆದ ನ್ಯಾಷನಲ್ ಲೆವೆಲ್ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿ, ಅರ್ಹತಾ ಅಂಕಗಳನ್ನು ಗಳಿಸುವುದರೊಂದಿಗೆ, 6 ವಿದ್ಯಾರ್ಥಿಗಳು ಚಾಂಪಿಯನ್ ಆಗಿ ಹೊರ ಹೊಮ್ಮುವ ಮೂಲಕ ಸಮಗ್ರ ಪ್ರಶಸ್ತಿಯನ್ನು ಪಡೆದು ಪುತ್ತೂರಿಗೆ ಕೀರ್ತಿಯನ್ನು ತಂದಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳು ಐಆರ್‌ಸಿಎಂಡಿ ಶಿಕ್ಷಣ...
ನವ ಚೇತನ ಯುವಕ ಮಂಡಲ ಬೊಳುಬೈಲು ಇದರ ವಾರ್ಷಿಕ ಮಹಾಸಭೆ ಮತ್ತು 2022-23ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮೇ.3 ರಂದು ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರವಾಧ್ಯಕ್ಷ ಸುಧೀರ್ ನೆಕ್ರಾಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಯಾನಂದ ಕೇರ್ಪಳ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು....
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಮೇ.06 ರಿಂದ ಮೇ.25 ರವರೆಗೆ ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದ ವಠಾರದಲ್ಲಿ ಯೋಗ ಶಿಬಿರ ನಡೆಯಲಿದೆ.
ಪೆರಾಜೆಯ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಂಘ ಇದರ ಆಶ್ರಯದಲ್ಲಿ ಪೆರಾಜೆಯ ಪಯಸ್ವಿನಿ ಸೇತುವೆ ಬಳಿ ಈಜು ತರಬೇತಿ ಶಿಬಿರದ ಉದ್ಘಾಟನೆ ನಡೆಯಿತು. ಶಿಬಿರವನ್ನು ಪೆರಾಜೆ ಶ್ರೀ ಶಾಸ್ತಾವು ದೇವಳದ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ ಉದ್ವಾಟಿಸಿದರು. ಈ ಸಂದರ್ಭದಲ್ಲಿ ಸಂಘಟಕರಾದ ಪೆರಾಜೆ ಅಯ್ಯಪ್ಪ ದಿಪೋತ್ಸವ ಸಮಿತಿ ಕಾರ್ಯದರ್ಶಿ ಸುರೇಶ್ ಪೆರುಮುಂಡ, ನಿರ್ದೇಶಕ ರಾದ ಯುವಾನಂದ ಪೆರಂಗಜೆ...
ಸುಳ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಚೇತನ್ ನಾವೂರು ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಯುವ ಮೋರ್ಚಾ ಉಪಾಧ್ಯಕ್ಷ ರಾಗಿದ್ದ ಮನುದೇವ್ ಪರಮಲೆ ಅವರಿಗೆ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ಸುಳ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಚೇತನ್ ನಾವೂರು ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಬಿಜೆಪಿ ಸುಳ್ಯ ಮಂಡಲದಲ್ಲಿ ಮೂರು ವರ್ಷಗಳ ಅವಧಿಗೆ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಬೆಳಂದೂರು ಬಿಜೆಪಿ ಮಹಾ ಶಕ್ತಿ ಕೇಂದ್ರದ ವ್ಯಾಪ್ತಿಯಿಂದ ಚೇತನ್ ನಾವೂರು ಅವರನ್ನು ಆಯ್ಕೆ ಮಾಡಲಾಗಿತ್ತು. ಸ್ಥಳೀಯ ಬಿಜೆಪಿ ನಾಯಕರ ವರ್ತನೆಯಿಂದ ಮನನೊಂದು ಪಕ್ಷದ...
Loading posts...
All posts loaded
No more posts