ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್‌ನಲ್ಲಿ ಫ್ಯಾಷನ್ ವೆಂಚರ್ ಪಾಲುದಾರಿಕೆಯ ‘ಗೋಕುಲಂ ಕಿಡ್ಸ್ ವೇರ್’ ಮಕ್ಕಳ ಉಡುಪುಗಳ ಮಳಿಗೆ ಶುಭಾರಂಭ ಗೊಂಡಿತ್ತು. ಮಳಿಗೆಯನ್ನು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಉದ್ಘಾಟಿಸಿ ಮಾತನಾಡಿದರು.ಅವರು ವ್ಯಾಪಾರ ಮಾಡುವವರಿಗೆ, ಹೂಡಿಕೆದಾರರಿಗೆ, ಸ್ವ ಉದ್ಯೋಗ ಮಾಡುವವರಿಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು. ಆಗ ಮಾತ್ರ ಸ್ವಾವಲಂಬನೆ, ಉದ್ಯೋಗ ಸೃಷ್ಠಿ ಮತ್ತು ನಾಡಿನ ಅಭಿವೃದ್ಧಿ ಸಾಧ್ಯ. ವೃತ್ತಿಯ ಬಗ್ಗೆ ಯಾರಿಗೂ ಕೀಳರಿಮೆ ಬೇಡ, ವೃತ್ತಿಯ ಬಗ್ಗೆ ಅಭಿಮಾನ ಗೌರವ ಇರಬೇಕು ಹೀಗೆ ಗೋಕುಲಂ ಸಂಸ್ಥೆ ಅಭಿವೃದ್ಧಿ ಕಾಣಲಿ ಎಂದು ಹಾರೈಸಿದರು. ನಂತರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಮಳಿಗೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ‘ಕೆಲವು ಯುವಕರು ಸೇರಿ ಮಾಡಿದ ಈ ರೀತಿಯ ಹೊಸ ಕಲ್ಪನೆಯ ಉದ್ಯಮ ಮಾದರಿಯಾಗಿದೆ. ತಮ್ಮ ಉದ್ಯೋಗದ ಜೊತೆ ಹಲವರಿಗೆ ಉದ್ಯೋಗ ಸೃಷ್ಟಿಸುವುದು ಇದುವೇ ನಿಜವಾದ ಆತ್ಮ ನಿರ್ಭರ ಭಾರತ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಹೆಚ್ ಇ.ಎಫ್ ಸುಳ್ಯ ಘಟಕದ ಅಧ್ಯಕ್ಷ ನವೀನ್ ಅಳಿಕೆ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಹರಿ ಕಾಂಪ್ಲೆಕ್ಸ್‌ನ ಮಾಲಕ, ಉದ್ಯಮಿ ಕೃಷ್ಣ ಕಾಮತ್ ಅರಂಬೂರು, ಸುಳ್ಯ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಡಾ.ಹರಪ್ರಸಾದ್ ತುದಿಯಡ್ಕ, ಮಕ್ಕಳ ತಜ್ಞ ಖ್ಯಾತ ವೈದ್ಯರಾದ ಡಾ.ಶ್ರೀಕೃಷ್ಣ ಭಟ್, ಸುಳ್ಯ ಬಿಸಿನೆಸ್ ವೆಂಚರ್‌ನ ಮ್ಯಾನೆಜಿಂಗ್ ಪಾಲುದಾರ ಚಿದಾನಂದ ವಿದ್ಯಾನಗರ ಮಾತನಾಡಿದರು.ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ ಅಮೈ ಅವರನ್ನು ಸನ್ಮಾನಿಸಲಾಯಿತು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಬಂದ ಸಾತ್ವಿಕ್ ಹೆಚ್.ಎಸ್, 624 ಅಂಕ ಪಡೆದ ಪ್ರಿಮೆಲ್ ವೆನಿಷಾ ಡಿಸೋಜ, ಯೋಗ ಪಟುಗಳಾದ ಹಾರ್ದಿಕಾ ಕೆರೆಕೋಡಿ, ಶ್ರಾವ್ಯ ಕೆ.ಎಚ್, ಕಲಾ ಪ್ರತಿಭೆಗಳಾದ ವೈಷ್ಣವಿ ಪ್ರಕಾಶ್, ಸೋನಾ ಅವರನ್ನು ಸನ್ಮಾನಿಸಲಾಯಿತು.ಸುಳ್ಯ ಬಿಸಿನೆಸ್ ವೆಂಚರ್‌ನ ಪಾಲುದಾರರಾದ ಪ್ರಸಾದ್ ಕಾಟೂರು ಸ್ವಾಗತಿಸಿ, ಬಾಲಕೃಷ್ಣ ಎಂ.ಡಿ. ವಂದಿಸಿದರು. ಆಶಿಕಾ ಚಂದ್ರಶೇಖರ ಪ್ರಾರ್ಥಿಸಿದರು. ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಮಕ್ಕಳ ಉಡುಪುಗಳ ಎಕ್ಸ್‌ಕ್ಯೂಸಿವ್ ಶೋರೂಂ:’ಗೋಕುಲಂ ಕಿಡ್ಸ್ ವೇರ್’ ಮಕ್ಕಳ ಉಡುಪುಗಳಿಗಾಗಿ ಇರುವ ಎಕ್ಸ್‌ಕ್ಯೂಸಿವ್ ಶೋರೂಂ ಆಗಿದೆ. ಮಕ್ಕಳ ವೈವಿಧ್ಯ ಹಾಗು ವರ್ಣಮಯ ವಸ್ತ್ರಗಳ ಅತ್ಯಾಕರ್ಷಕ ಹಾಗು ಅಪೂರ್ವ ವಸ್ತ್ರಗಳ ಸಂಗ್ರಹದೊಂದಿಗೆ ಮಕ್ಕಳ ಈ ‘ಗೋಕುಲಂ’ ತೆರೆದುಕೊಂಡಿದೆ. ಎಲ್ಲಾ ಪ್ರಾಯದ ಮಕ್ಕಳಿಗೂ ಹಲವಾರು ವಿಧದ, ಫ್ಯಾಷನ್‌ನ, ಗಾತ್ರದ ಬಟ್ಟೆಗಳು ಇರುತ್ತದೆ. 16 ವರ್ಷದವರೆಗಿನ ಮಕ್ಕಳ ಎಲ್ಲಾ ತರಹದ ಆಧುನಿಕ ಫ್ಯಾಷನ್ ಹಾಗು ಬ್ರಾಂಡೆಡ್ ಬಟ್ಟೆಗಳು ಸ್ಪರ್ಧಾತ್ಮಕ ದರದಲ್ಲಿ ದೊರೆಯಲಿದೆ. ಮನಸ್ಸಿಗೆ ಇಚ್ಚೆಯ ಆಯ್ಕೆ ಹವಾ ನಿಯಂತ್ರಿತ ಮಳಿಗೆ, ವಿಶಾಲವಾದ ಪಾರ್ಕಿಂಗ್, ನುರಿತ ಅನುಭವ ಸಿಬ್ಬಂದಿಗಳು. ಹೀಗೆ ಹತ್ತು ಹಲವುವೈವಿಧ್ಯತೆಗಳೊಂದಿಗೆ ತೆರೆದು ಗೋಕುಲಂ ಸುಳ್ಯದ ಜನತೆಯನ್ನು ಕೈ ಬೀಸಿ ಕರೆಯುತಿದೆ. ಸುಳ್ಯ ಫ್ಯಾಷನ್ ವೆಂಚರ್‌ನ ಸುಸಜ್ಜಿತ ಹವಾನಿಯಂತ್ರಿತ ಮಳಿಗೆಯಲ್ಲಿ ಪ್ರಸಿದ್ಧ ಕಂಪೆನಿಯ ಮಕ್ಕಳ ಅತ್ಯಾಕರ್ಷಕ ಸಿದ್ಧ ಉಡುಪುಗಳು ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆದು ಕೊಳ್ಳುವಂತೆ ಪಾಲುದಾರರು ವಿನಂತಿಸಿಕೊಂಡಿರುತ್ತಾರೆ.
- Thursday
- November 21st, 2024