Ad Widget

ವಿರಾಟ್ ಫ್ರೆಂಡ್ಸ್(ರಿ.)ಬೆಳ್ಳಾರೆ ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ

ವಿರಾಟ್ ಫ್ರೆಂಡ್ಸ್(ರಿ.)ಬೆಳ್ಳಾರೆ ಇದರ ವಾರ್ಷಿಕ ಮಹಾಸಭೆಯು ಮೇ.20ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಿರಾಟ್ ಫ್ರೆಂಡ್ಸ್(ರಿ.)ಬೆಳ್ಳಾರೆ ಅಧ್ಯಕ್ಷ ಸಚಿನ್ ರೈ ಪೂವಾಜೆ ವಹಿಸಿದ್ದರು. ಈ ಸಂದರ್ಭದಲ್ಲಿ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ಮನೋಜ್ ಶೆಟ್ಟಿ ಬೆಳ್ಳಾರೆ, ಕಾರ್ಯದರ್ಶಿಯಾಗಿ ಧೀರಜ್. ಪಿ, ಕೋಶಾಧಿಕಾರಿಯಾಗಿ ಪ್ರದೀಪ್ ಬೆಳ್ಳಾರೆ ಇವರುಗಳು ಅವಿರೋಧವಾಗಿ ಆಯ್ಕೆಯಾದರು.

ಕು|ಹರ್ಷಿತಾ.ಟಿ ರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 552 ಅಂಕ

ಬೆಳ್ಳಾರೆ ಶ್ರೀ ಸುಬ್ರಹ್ಮಣ್ಯೇಶ್ವರ ಮೋಟಾರ್ ವರ್ಕ್ಸ್ ನ ಮಾಲಕರಾದ ಶ್ರೀ ತಿರುಮಲೇಶ್ವರ ಕುಲಾಲ್ ಹಾಗೂ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಶ್ರೀಮತಿ ಕೆ.ಸಿ.ಬೇಬಿ ದಂಪತಿಗಳ ಪುತ್ರಿ ಕು|ಹರ್ಷಿತಾ.ಟಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 552 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಪುತ್ತೂರು ತಾಲೂಕಿನ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ.
Ad Widget

ಎಸ್.ಎಸ್.ಎಲ್.ಸಿ ಫಲಿತಾಂಶ : ಕೊಲ್ಲಮೊಗ್ರು ಕೆ.ವಿ.ಜಿ ಅನುದಾನಿತ ಪ್ರೌಢಶಾಲೆಗೆ ಶೇ.75 ಫಲಿತಾಂಶ

2021-22ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು, ಕೊಲ್ಲಮೊಗ್ರು ಕೆ.ವಿ.ಜಿ ಅನುದಾನಿತ ಪ್ರೌಢಶಾಲೆ ಶೇ.75 ಫಲಿತಾಂಶ ದಾಖಲಿಸಿದೆ.32 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 24 ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.4 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 1 ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವರದಿ :- ಉಲ್ಲಾಸ್ ಕಜ್ಜೋಡಿ

ನಾಲ್ಕೂರು ಹಾಲೆಮಜಲಿನ ಕು. ಭುವಿತ ಪಿ ಬಿ ರಿಗೆ ಎಸ್ಸೆಸ್ಸೆಲ್ಸಿಯಲ್ಲಿ 576 ಅಂಕ

ಗುತ್ತಿಗಾರು ಗ್ರಾಮ ಪಂಚಾಯತಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ಕಾವೇರಿ ಕೋಂ ಭರತ್ ಹಾಲೆಮಜಲು ನಾಲ್ಕೂರು ಇವರ ಪುತ್ರಿ ಕು. ಭುವಿತ ಪಿ ಬಿ ಇವರು 576 ಅಂಕ ಗಳಿಸಿರುತ್ತಾರೆ. ಎಲಿಮಲೆ ಪ್ರೌಢಶಾಲಾ ವಿದ್ಯಾರ್ಥಿಯಾಗಿರುವ ಇವರಿಗೆ ಕಂಪ್ಯೂಟರ್ ಸೈನ್ಸ್ ನಲ್ಲಿ ಆಸಕ್ತಿ ಇದ್ದು, ಪಿಸಿಎಂಸಿ ಯಲ್ಲಿ ಪದವಿ ಮಾಡಬೇಕು ಎಂಬ ಆಸೆ ಇದೆ.
error: Content is protected !!