ಉರುಳುತಿದೆ ಕಾಲವು, ಸಾಗುತಿದೆ ಜೀವವು…
ಕನಸನೆಲ್ಲಾ ಮೂಟೆ ಕಟ್ಟಿ, ಕೊನೆಯೇ ಇರದ ದಾರಿ ಮುಟ್ಟಿ ಸಾಗುತಿದೆ ಜೀವವು, ಉರುಳುತಿದೆ ಕಾಲವು…
ಕನಸಿನ ದಾರಿಯ ದಾಟಿ, ಮನಸಿನ ಮೌನವ ಮೀರಿ ಮೈಲಿಗಲ್ಲು ಇರದ ದಾರಿ ಹುಡುಕಿ ಸಾಗಿ…
ಉರುಳುತಿದೆ ಕಾಲವು, ಸಾಗುತಿದೆ ಜೀವವು…
ಏತಕೆ ತಿಳಿಯದ ಪಯಣ, ಸಾಗಿದೆ ಹುಡುಕಿ ಕಾರಣ…
ಸಾಗುವುದೆಲ್ಲೋ, ಸೇರುವುದೆಲ್ಲೋ ತಿಳಿದೇ ಇಲ್ಲ…
ಕ್ಷಣಿಕದ ಬದುಕಿನಲ್ಲಿ ಕ್ಷಣ ಕ್ಷಣವು ಅನುಭವ ತಾನೇ, ಅರಿತುಕೊಂಡು, ತಿಳಿದುಕೊಂಡು ಸಾಗಬೇಕು…
ಬದುಕಿನ ಪುಸ್ತಕದಲ್ಲಿ ಪ್ರತಿ ಪುಟವು ಪಾಠವೇನೇ, ಕಲಿತುಕೊಂಡು, ಅರಿತುಕೊಂಡು ಮುನ್ನಡೆಯಬೇಕು…
ಉರುಳುತಿದೆ ಕಾಲವು, ಸಾಗುತಿದೆ ಜೀವವು…
ಸಮಯದ ಆಟದಲ್ಲಿ ಯಾವುದೂ ಶಾಶ್ವತವಲ್ಲ, ಒಳ್ಳೆತನವು ಒಳ್ಳೆಮನವು ಸ್ಥಿರವು ತಾನೇ, ಬದುಕಿನಲ್ಲಿ ಶಾಶ್ವತಾನೇ…
✍️ಉಲ್ಲಾಸ್ ಕಜ್ಜೋಡಿ