Ad Widget

ನಾಗಪಟ್ಟಣ ಸೇತುವೆ ದುರಸ್ತಿಗೆ ಮನವಿ – ತಾತ್ಕಾಲಿಕ ದುರಸ್ತಿ ಪಡಿಸುವ ಭರವಸೆ ನೀಡಿದ ಇಂಜಿನಿಯರ್

ಆಲೆಟ್ಟಿ ಗ್ರಾಮದ ನಾಗಪಟ್ಟಣ ಸೇತುವೆ ಕಾಮಗಾರಿ ತುರ್ತಾಗಿ ದುರಸ್ತಿ ಪಡಿಸುವಂತೆ ಆಗ್ರಹಿಸಿ ಪಂಚಾಯತ್ ಸದಸ್ಯ ಧರ್ಮಪಾಲ ಕೊಯಿಂಗಾಜೆ ಯವರ ನೇತೃತ್ವದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರಿಗೆ ಮನವಿ ಸಲ್ಲಿಸಿದರು. ಸ್ಪಂದಿಸಿದ ಇಲಾಖೆಯ ಅಭಿಯಂತರ ರಾದ ಲೋಕೇಶ್ ಮತ್ತು ಪರಮೇಶ್ವರ ರವರು ಎ.29 ರಂದು ಸ್ಥಳಕ್ಕೆ ಭೇಟಿ ನೀಡಿ ಸೇತುವೆಯ ಕಾಮಗಾರಿ ಕುರಿತು ಪರಿಶೀಲನೆ ನಡೆಸಿ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಶೀಘ್ರ ಮಾಡುವುದಾಗಿ ಭರವಸೆ ನೀಡಿರುತ್ತಾರೆ. ಈಗಾಗಲೇ ಸುಳ್ಯದ ಗಾಂಧಿನಗರದಿಂದ ಕೂರ್ನಡ್ಕ ದವರೆಗೆ ಲೋಕೋಪಯೋಗಿ ಇಲಾಖೆಯ ರಸ್ತೆ ಎಂದು ಪರಿಗಣಿಸಿ ಆದೇಶ ಬಂದಿದ್ದು ಮುಂದಿನ ದಿನಗಳಲ್ಲಿ ಸೇತುವೆ ಕಾಮಗಾರಿಯನ್ನು ವೈಜ್ಞಾನಿಕವಾಗಿ ಸಂಪೂರ್ಣವಾಗಿ ನಿರ್ವಹಿಸುವ ಕುರಿತು ಇಂಜಿನಿಯರ್ ರವರು ತಿಳಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯ ಧರ್ಮಪಾಲ ಕೊಯಿಂಗಾಜೆ, ತೇಜಕುಮಾರ್ ಬಡ್ಡಡ್ಕ, ಗಿರಿಜಾ ಶಂಕರ ತುದಿಯಡ್ಕ, ಆನಂದ ನಾಗಪಟ್ಟಣ, ಜೀವರತ್ನ ನಾಗಪಟ್ಟಣ,ರಾಜ್ ಕುಮಾರ್ ನಾಗಪಟ್ಟಣ, ರಮೇಶ್ ಬಡ್ಡಡ್ಕ ಮತ್ತಿತರರು ಉಪಸ್ಥಿತರಿದ್ದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!