ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ಚೆನ್ನಕೇಶವ ಅವರು ಮಂಗಳೂರಿಗೆ ವರ್ಗಾವಣೆ ಆಗಿದ್ದು, ಸುಳ್ಯ ತಾಲೂಕು ನೂತನ ಯೋಜನಾಧಿಕಾರಿಗಳಾಗಿ ನಾಗೇಶ್.ಪಿ ಅವರು ಎ.27 ರಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಚೆನ್ನಕೇಶವ ಅವರಿಗೆ ಸುಳ್ಯ ಯೋಜನಾ ಕಛೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಎನ್.ಎ ರಾಮಚಂದ್ರ, ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ವಿಶ್ವನಾಥ ರೈ ಕಳಂಜ, ಲೋಕನಾಥ್ ಆಮೆಚೂರ್, ರಾಜಾರಾಮ್ ಬೆಟ್ಟ, ಮಲ್ಲೇಶ್ ಬೆಟ್ಟಂಪಾಡಿ, ಬೂಡು ರಾಧಾಕೃಷ್ಣ ರೈ, ಯತೀಶ್ ರೈ, ಜನಜಾಗೃತಿ ವೇದಿಕೆಯ ಹಾಲಿ ಸದಸ್ಯರಾದ ವಿಮಲಾ ರಂಗಯ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದ.ಕ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ಹಾಗೂ ಸುಳ್ಯ ತಾಲೂಕಿನ ಎಲ್ಲಾ ವಲಯ ಮೇಲ್ವಿಚಾರಕರು ಹಾಗೂ ಸೇವಾಪ್ರತಿನಿಧಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ