
ಮಂಗಳೂರಿನ ಮನ್ವಿತ್(12 ವರ್ಷ) ಎಂಬಾತ
ಅರಂತೋಡು ಗ್ರಾಮದ ಕುಕ್ಕುಂಬಳ ಹೊಳೆಯಲ್ಲಿ ಸ್ನಾನ
ಮಾಡಲೆಂದು ಹೋದ ಸಂದರ್ಭ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಸಂಜೆ ವರದಿಯಾಗಿದೆ. ಅರಂತೋಡಿನ ದಾಮೋದರ ಶೆಟ್ಟಿಯವರ ಪುತ್ರಿಯನ್ನು
ಮಂಗಳೂರಿಗೆ ವಿವಾಹ ಮಾಡಿಕೊಡಲಾಗಿದ್ದು, ಅವರ ಮಗ ಮನ್ವಿತ್ ಅಜ್ಜನ ಮನೆಗೆ ಬಂದ ಸಂದರ್ಭ ಹಂಸ
ಕುಕ್ಕುಂಬಳರವರ ಮನೆ ಸಮೀಪ ಸ್ನಾನ ಮಾಡಲೆಂದು ನೀರಿಗಿಳಿದ ಬಾಲಕ ನೀರಿನಲ್ಲಿ ಮುಳುಗಿದನೆಂದು ತಿಳಿದುಬಂದಿದೆ.
ಶರತ್ ಅಡ್ಯಡ್ಕ, ನಿಧೀಶ್ ಅರಂತೋಡು, ತಾಜುದ್ದೀನ್ ಅರಂತೋಡು, ಮುನೀರ್ ಸಂಟ್ಯಾರ್, ಫಯಾಝ್ ಪಟೇಲ್, ಸಂಸುದ್ದೀನ್ ಪೆಲ್ತಡ್ಕ ರವರು ಬಾಲಕನ ಮೃತದೇಹ ಹೊರತೆಗೆಯಲು ಸಹಕರಿಸಿದರು.