Ad Widget

ನಿನಾದ ತಂಟೆಪ್ಪಾಡಿಯಲ್ಲಿ “ಸಾಧನೆಯ ಸಂಭ್ರಮ”; ಸಾಧಕರೊಂದಿಗೆ ಸಂವಾದ, ಸಾಧಕರಿಗೆ ಸನ್ಮಾನ ಹಾಗೂ “ಮುಖ್ಯಮಂತ್ರಿ” ನಾಟಕ ಪ್ರದರ್ಶನ

ಕಳಂಜ ಗ್ರಾಮದ ನಿನಾದ ಸಾಂಸ್ಕೃತಿಕ ಕೇಂದ್ರದಲ್ಲಿ “ಸಾಧನೆಯ ಸಂಭ್ರಮ”, ಸಾಧಕರೊಂದಿಗೆ ಸಂವಾದ, ಸಾಧಕರಿಗೆ ಸನ್ಮಾನ ಹಾಗೂ “ಮುಖ್ಯಮಂತ್ರಿ” ನಾಟಕ ಪ್ರದರ್ಶನ ಏ.24 ಆದಿತ್ಯವಾರದಂದು ಜರುಗಿತು.

. . . . . . . . .

ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಜನಪ್ರಿಯ ಚಲನಚಿತ್ರ, ಧಾರಾವಾಹಿ ಮತ್ತು ರಂಗಭೂಮಿ ನಟರಾದ ಶ್ರೀ ಮುಖ್ಯಮಂತ್ರಿ ಚಂದ್ರು ಹಾಗೂ ಡಾ.ಬಿ.ವಿ.ರಾಜಾರಾಂ ಭಾಗವಹಿಸಿದರು.

. . . . . . .

ಕಾರ್ಯಕ್ರಮದಲ್ಲಿ ಸಾಧಕರ ಸನ್ಮಾನದ ಅಂಗವಾಗಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಶ್ರೀ ಪ್ರಶಾಂತ್ ರೈ ಕೈಕಾರ, ಕರ್ನಾಟಕ ಯಕ್ಷರಂಗಾಯಣ ಕಾರ್ಕಳ ಇದರ ನಿರ್ದೇಶಕರಾದ ಶ್ರೀ ಜೀವನ್ ರಾಂ ಸುಳ್ಯ ಹಾಗೂ ಯೋಗಾಸನದಲ್ಲಿ ರಾಷ್ಟ್ರೀಯ ದಾಖಲೆಗೈದ ಶ್ರೀ ಮೋನಿಷ್ ತಂಟೆಪ್ಪಾಡಿ ಇವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಗೌರವ ಉಪಸ್ಥಿತಿಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ ಅಣ್ಣಾ ವಿನಯಚಂದ್ರ ಕಿಲಂಗೋಡಿ, ಕಳಂಜ ಗ್ರಾ.ಪಂ.ಅಧ್ಯಕ್ಷ ಶ್ರೀ ಪ್ರಶಾಂತ್ ಕುಮಾರ್ ಕಿಲಂಗೋಡಿ, ಬಾಳಿಲ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಸವಿತಾ ಗುರುರಾಜ್ ಚಾಕೋಟೆಡ್ಕ, ಕಳಂಜ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀ ಶ್ರೀಧರ್.ಕೆ.ಆರ್, ನಿನಾದ ತಂಟೆಪ್ಪಾಡಿಯ ಐತ್ತಪ್ಪ ಶೆಟ್ಟಿ ತಂಟೆಪ್ಪಾಡಿ, ವಾಸಪ್ಪ ಶೆಟ್ಟಿ ತಂಟೆಪ್ಪಾಡಿ ಇದ್ದರು. ಕಾರ್ಯಕ್ರಮವನ್ನು ರಂಗಕರ್ಮಿ, ಸಾಂಸ್ಕೃತಿಕ ಸಂಘಟಕರಾದ ಶ್ರೀ ಶ್ರೀನಿವಾಸ.ಜಿ ಕಪ್ಪಣ್ಣ ರವರು ಸಂಯೋಜಿಸಿದರು. ನಿನಾದ ತಂಟೆಪ್ಪಾಡಿಯ ಮುಖ್ಯಸ್ಥ ವಸಂತ ಶೆಟ್ಟಿ ಬೆಳ್ಳಾರೆ ಸ್ವಾಗತಿಸಿದರು. ಪ್ರಮೋದ್ ಶೆಟ್ಟಿ ಬೆಳ್ಳಾರೆ ಸಹಕರಿಸಿದರು.

ಬಳಿಕ ಕರ್ನಾಟಕ ಹವ್ಯಾಸಿ ರಂಗಭೂಮಿಯ ಮಹತ್ತರ ದಾಖಲೆಯ ‘ಕಲಾಗಂಗೋತ್ರಿ’ ಅಭಿನಯಿಸುವ, ಡಾ.ಬಿ.ವಿ.ರಾಜಾರಾಂ ನಿರ್ದೇಶಿಸಿದ, “ಮುಖ್ಯಮಂತ್ರಿ” ನಾಟಕ ಪ್ರದರ್ಶನಗೊಂಡಿತು. ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ನಾಟಕ ವೀಕ್ಷಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading