
ಎ. ೭ ರಂದು ಸುಳ್ಯದಿಂದ ಮಡಪ್ಪಾಡಿ ಕಡೆಗೆ ತನ್ನ ಬೈಕ್ ನಲ್ಲಿ ತೆರಳುತ್ತಿದ್ದ ಯುವಕ ಕಂದಡ್ಕ ಸೇತುವೆಗೆ ಬೈಕ್ ಡಿಕ್ಕಿಯಾಗಿ ಕೈ ಮತ್ತು ತಲೆಗೆ ಗಂಭೀರ ಗಾಯಗೊಂಡು ಎ.೨೪ ರಂದು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿರುವುದಾಗಿ ತಿಳಿದು ಬಂದಿದೆ .ಮೃತಪಟ್ಟ ಯುವಕನನ್ನು ಪೆರಾಜೆ ಗ್ರಾಮದ ನಿಡ್ಯಮಲೆ ಜಯರಾಮ ಎಂಬವರ ಪುತ್ರ ಸಿನಾತ್ (೨೫) ಎಂದು ತಿಳಿದುಬಂದಿದೆ . ಸಿನಾತ್ ಎ. ೭ ರಂದು ಮಡಪ್ಪಾಡಿಯ ತನ್ನ ಮಾವನ ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಬೈಕ್ ನಿಯಂತ್ರಣ ಕಳೆದು ಕಂದಡ್ಕದ ಸೇತುವೆಗೆ ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ತಲೆ ಹಾಗೂ ಕೈಗಳಿಗೆ ಗಂಭೀರ ಸ್ವರೂಪದ ಗಾಯಗೊಂಡು ಪ್ರಜ್ಞೆ ಕಳೆದುಕೊಂಡ ಯುವಕನನ್ನು ಸ್ಥಳೀಯರು ಸುಳ್ಯದ ಸರಕಾರಿ ಆಸ್ಪತ್ರೆ ದಾಖಲು ಮಾಡಿದ್ದಾರೆ. ಅಲ್ಲಿಂದ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದೊಯ್ದು ವೈದ್ಯರ ಸಲಹೆಯ ಮೇರೆಗೆ ಮನೆಯವರು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿದ್ದರು. ಹೆಚ್ಚಿನ ಶಸ್ತ್ರ ಚಿಕೆತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.
ಈತ ಸುಳ್ಯದ ಅಯಶ್ಯಿಲ್ಪದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇತ್ತೀಚೆಗೆ ಕೆಲಸ ಬಿಟ್ಟು ಉದ್ಯೋಗಕ್ಕಾಗಿ ಬೆಂಗಳೂರು ತೆರಳಲು ತಯಾರಿ ನಡೆಸಿದ್ದು ಆದರೆ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ತಾಯಿ ವಸಂತಿ, ಸಹೋದರ ಶರತ್ ನಿಡ್ಯಮಲೆ, ಸಹೋದರಿ ಧನ್ಯಶ್ರಿ ,ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.