ಪ್ರಾದೇಶಿಕ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ “ಶೀಲ ಮತ್ತು ಶಿಸ್ತಿ”ನ ತಳಹದಿಯಲ್ಲಿ ಹುಟ್ಟಿಕೊಂಡ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಸುಳ್ಯ ತಾಲೂಕಿನ ಅರಂತೋಡು ಹಾಗೂ ತೊಡಿಕಾನ ಗ್ರಾಮಗಳಲ್ಲಿ “ಲಂಚಮುಕ್ತ ಅಭಿಯಾನ” ಕಾರ್ಯಕ್ರಮವನ್ನು ಏ.19ರಂದು ಮಧ್ಯಾಹ್ನ 2.00 ಗಂಟೆಯಿಂದ ಸಂಜೆ 6.00 ಗಂಟೆಯ ತನಕ ಹಮ್ಮಿಕೊಳ್ಳಲಾಯಿತು. ಈ ಅಭಿಯಾನದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಡಿ.ಅಲೆಕ್ಸಾಂಡರ್ ಡಿಸೋಜ, ಸುಳ್ಯ ಘಟಕದ ಅಧ್ಯಕ್ಷರಾದ ಸದಾಶಿವ ಪೂಜಾರಿ ಬೆಳ್ಳಾರೆ, ಮಾಜಿ ಸೈನಿಕರಾದ ಕೃಷ್ಣ ಗೌಡ.ಎಂ.ಟಿ ತೊಡಿಕಾನ, ಮಹಮ್ಮದ್ ಹ್ಯಾರಿಸ್ ಭಾಗವಹಿಸಿದ್ದರು.
- Friday
- November 22nd, 2024