
ಸುಳ್ಯದ ಗಾಂಧಿನಗರದ ಮುಖ್ಯರಸ್ತೆಯಲ್ಲಿ ಲಾರಿಯಡಿಗೆ ಹಾರಿ ಆತ್ಮಹತ್ಯೆಗೆ ಯುವಕನೋರ್ವ ಯತ್ನಿಸಿದ ಘಟನೆ ಇಂದು ವರದಿಯಾಗಿದೆ. ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಆತನನ್ನು ತಕ್ಷಣ ಸುಳ್ಯ ಸರಕಾರಿ ಆಸ್ಪತ್ರೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ. ಆತನನ್ನು ಉತ್ತರ ಕರ್ನಾಟಕ ಕೂಲಿ ಕಾರ್ಮಿಕ ಮಂಜುನಾಥ್ ಎಂದು ಗುರುತಿಸಲಾಗಿದೆ.