Ad Widget

ಅರಂತೋಡು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಅರಂತೋಡು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಜನ ಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಭೆ ತೆಕ್ಕಿಲ್ ಸಮುದಾಯ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ತೆಕ್ಕಿಲ್ ಸಮುದಾಯ ಭವನ ಆರಂತೋಡು ನಲ್ಲಿ ನಡೆಯಿತು. ನೂತನ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಪಂಚಾಯತ್ ಸದಸ್ಯರು ಎದುರಿಸುತ್ತಿರುವ ಸಮಸ್ಯೆ, ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ಪಂಚಾಯತ್ ಸದಸ್ಯರುಗಳನ್ನು ಹೆಚ್ಚು ಕಾಣಲು, ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆ ಬಗ್ಗೆ, ವಿಚಾರ, ವಿನಿಮಯ, ವಿಮರ್ಶೆ ಮಾಡಿದರು ಹಾಗೂ ಪಂಚಾಯತ್ ಸದಸ್ಯರು ಗಳ ಅಭಿಪ್ರಾಯ ಸಂಗ್ರಹ ಮಾಡಿದರು, ಸಭೆಯಲ್ಲಿ ವಿಶೇಷ ವಾಗಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ತಮ್ಮ ಅಭಿಪ್ರಾಯ ತಿಳಿಸಿದರು.

. . . . .

ಸಂಪಾಜೆ ಪಂಚಾಯತ್ ಸದಸ್ಯರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆ ಪಕ್ಷವನ್ನು ತಳ ಮಟ್ಟದಲ್ಲಿ ಕಟ್ಟಲು ಇರುವ ಸಮಸ್ಯೆ ಹಾಗೂ ಇತರ ವಿಚಾರಗಳನ್ನು ಮಂಡಿಸಿದರು., ಪಂಚಾಯತ್ ಸದಸ್ಯರು ಗಳಾದ ಧರ್ಮಪಾಲ ಕೊಯಿಂಗಾಜೆ, ಗೀತಾ ಕೊಲ್ಚಾರ್, ಉಬರಡ್ಕ ಪಂಚಾಯತ್ ಅಧ್ಯಕ್ಷರಾದ ಚಿತ್ರಾ ಕುಮಾರಿ, ಸದಸ್ಯ ಅನಿಲ್ ಬಳ್ಳಡ್ಕ, ಅಲೆಟ್ಟಿ ಪಂಚಾಯತ್ ಸದಸ್ಯ ಸತ್ಯ ಕುಮಾರ್ ಅಡಿಂಜೆ, ಆರಂತೋಡು ಪಂಚಾಯತ್ ಮಾಜಿ ಸದಸ್ಯ ತಿಮ್ಮಯ್ಯ, ಸಮಸ್ಯೆಗಳ ಬಗ್ಗೆ ಗಮನ ಸೆಳೆದರು ,ಸಂಪಾಜೆ ಪಂಚಾಯತ್ ಸದಸ್ಯ ಅಬೂಸಾಲಿ ಪಿ. ಕೆ.. ಪಕ್ಷದಲ್ಲಿ ಹುದ್ದೆ ಎಲ್ಲರಿಗೂ ಹಂಚಿಕೆ ಮಾಡಿ ಕೆಲಸ ಮಾಡುವವರಿಗೆ ಅವಕಾಶ ಒದಗಿಸಲು ಕೇಳಿಕೊಂಡರು. ಒಬ್ಬರಿಗೆ ಎರಡು ಮೂರೂ ಹುದ್ದೆ ಬೇಡ ಎಂದರು, ಪಕ್ಷದ ಪ್ರಮುಖರಾದ ಟಿ. ಎಮ್. ಶಾಹಿದ್ ತೆಕ್ಕಿಲ್ ಒಕ್ಕಲಿಗರು ಹೆಚ್ಚು ಇರುವ ಪ್ರದೇಶಗಳಲ್ಲಿ ಸಂಘಟನೆಗೆ ಅದೇ ಸಮುದಾಯದವರನ್ನು ಉಸ್ತುವಾರಿ ನೀಡಿ ಅವರನ್ನು ಬೆಳೆಸುವ ಕೆಲಸ ಮಾಡಬೇಕು, ಅಲ್ಪ ಸಂಖ್ಯಾತರಿಗೆ ರಕ್ಷಣೆ ಹಾಗೂ ಧೈರ್ಯ ನೀಡುವ ಕೆಲಸ ಮಾಡಿ ಭದ್ರತೆಯ ವಾತಾವರಣ ನಿರ್ಮಿಸಿ ಎಂದರು . ಪಕ್ಷ ಮುಖಂಡರುಗಳಾದ ಮಹಮದ್ ಕುಂಞ ಗೂನಡ್ಕ, ರಹೀಮ್ ಬೀಜದಕಟ್ಟೆ, ಆಶಿಕ್ ಆರಂತೋಡು, ಕಾಂತಿ ಯವರು ವಿವಿಧ ಸಲಹೆ ಸೂಚನೆಗಳನ್ನು ಅಭಿಪ್ರಾಯಗಳನ್ನೂ ವ್ಯಕ್ತ ಪಡಿಸಿದರು, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸುಭಾಷ್ ಕೊಲ್ನಾಡ್ ಜಿಲ್ಲೆಯಲ್ಲಿ ಪಂಚಾಯತ್ ಸದಸ್ಯರುಗಳ ಕಾರ್ಯಾಗಾರ ಮಾಡಿ ಸದಸ್ಯರುಗಳಲ್ಲಿ ಧೈರ್ಯ ತುಂಬುವ ಜೊತೆಗೆ ಸಂಘಟನೆ ಮಾಡಿ ತೋರಿಸುವ ಎಂದರು. ಎಲ್ಲರ ಅಭಿಪ್ರಾಯ ಪಡೆದ ಮಂಜುನಾಥ್ ಭಂಡಾರಿಯವರು, ಮುಂದಿನ ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಪಕ್ಷ ಹಾಗೂ ಜನ ಪ್ರತಿನಿಧಿಗಳಿಗೆ ಗೌರವ ಬರುವ ಕೆಲಸ ಮಾಡುವ ನನ್ನ ಅನುದಾನವನ್ನು ಪ್ರಾಮಾಣಿಕವಾಗಿ ಹಂಚುತ್ತೇನೆ ಎಂದರು. ಸುಳ್ಯ ಬ್ಲಾಕ್ ಅಧ್ಯಕ್ಷರಾದ ಜಯರಾಮ್ ಪಿ. ಸಿ,ಕೆಪಿಸಿಸಿ ಸದಸ್ಯ ಡಾ ರಘು, ಸುಳ್ಯ ಉಸ್ತುವಾರಿ ಸಂಯೋಜಕ ಕೃಷ್ಣಪ್ಪ, ಜಯಪ್ರಕಾಶ್ ನೆಕ್ರಪಾಡಿ, ಸುರೇಶ್ ಉಬರಡ್ಕ, ಸಂಪಾಜೆ ಪಂಚಾಯತ್ ಸದಸ್ಯರುಗಳಾದ ಎಸ್. ಕೆ. ಹನೀಫ್, ಸುಂದರಿ ಮುಂಡಡ್ಕ, ಸುಮತಿ ಶಕ್ತಿವೇಲು, ಸುಶೀಲ,ವಿಮಲಾ ಪ್ರಸಾದ್,ಕೆಪಿಸಿಸಿ ವಕ್ತಾರ ಸವಾದ್, ಮಾಜಿ ಅಧ್ಯಕ್ಷರಾದ ಯಮುನಾ, ಜಗದೀಶ್ ರೈ, ಮಾಜಿ ಸದಸ್ಯ ತಾಜ್ ಮಹಮ್ಮದ್, ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ರವಿ ಪೂಜಾರಿ, ಶಶಿಧರ್ ತೊಡಿಕಾನ, ಕೆಪಿಸಿಸಿ ಸಾಮಾಜಿಕ ಜಾಲತಾಣದ ಪ್ರಧಾನ ಕಾರ್ಯದರ್ಶಿ ರಿಯಾಜ್ ಕಲ್ಲುಗುಂಡಿ ,ಸುಳ್ಯ ಬ್ಲಾಕ್ ಕಾಂಗ್ರೆಸ್ ಸದಸ್ಯ ತಾಜುದ್ದೀನ್ ಆರಂತೋಡು, ಮಜೀದ್ ಆರಂತೋಡು, ಆರಂತೋಡು ಮಾಜಿ ಪಂಚಾಯತ್ ಉಪಾಧ್ಯಕ್ಷ ಅಶ್ರಫ್ ಗುಂಡಿ, ಅಬ್ದುಲ್ ರಹಿಮಾನ್ ಸಂಪಾಜೆ,ಅಣ್ಣಾದೊರೆ, ರಾಜು ಕಲ್ಲುಗುಂಡಿ, ಎಚ್. ಹಮೀದ್ ಸಂಪಾಜೆ, ರಝಾಕ್ ಟಿ. ಎಮ್, .ಎನ್ ಎಸ್ ಯು ಐ ಕಾರ್ಯದರ್ಶಿ ಪಿ ಎ ಉಬೈಸ್ ಗೂನಡ್ಕ, ಪಿ ಎ ಉನೈಸ್ ಗೂನಡ್ಕ, ಹಾರೀಶ್ ಝಮ್ ಝಮ್ ಗೂನಡ್ಕ, ಮಹಮದ್ ಪೆಲ್ತಡ್ಕ, ಅಶ್ರಫ್ ಡಿ ಎಂ ,ಟಿ ಎಂ ಮೂಸನ್ ಹಾಜಿ ತೆಕ್ಕಿಲ್ ಗೂನಡ್ಕ ,ಟಿ ಎ ಮಹಮ್ಮದ್ ಕುಂಞಿ ತೆಕ್ಕಿಲ್ ಪೆರಡ್ಕ ,ರಝಕ್ ಟಿ. ಎಮ್,ಹನೀಫ್ ಅರಂತೋಡು ಹಾಗುಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಪಿ ಸಿ ಜಯರಾಮ್ ಸ್ವಾಗತಸಿ ಸೋಮಶೇಖರ್ ಕೊಯಿಂಗಾಜೆ ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!