Ad Widget

ಏ.24: ನಿನಾದ ತಂಟೆಪ್ಪಾಡಿಯಲ್ಲಿ “ಸಾಧನೆಯ ಸಂಭ್ರಮ”, ಸಾಧನೆಯ ನಾಟಕ “ಮುಖ್ಯಮಂತ್ರಿ”

ಕಳಂಜ ಗ್ರಾಮದ ನಿನಾದ ಸಾಂಸ್ಕೃತಿಕ ಕೇಂದ್ರದಲ್ಲಿ “ಸಾಧನೆಯ ಸಂಭ್ರಮ”, ಸಾಧಕರೊಂದಿಗೆ ಸಂವಾದ, ಸಾಧಕರಿಗೆ ಸನ್ಮಾನ ಹಾಗೂ “ಮುಖ್ಯಮಂತ್ರಿ” ನಾಟಕ ಪ್ರದರ್ಶನ ಏ.24 ಆದಿತ್ಯವಾರದಂದು ಸಂಜೆ ಗಂಟೆ 5.00ಕ್ಕೆ ಜರುಗಲಿದೆ.

. . . . . . .

ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಶ್ರೀ ಭಾಸ್ಕರ್ ರಾವ್ ಹಾಗೂ ಜನಪ್ರಿಯ ಚಲನಚಿತ್ರ, ಧಾರಾವಾಹಿ ಮತ್ತು ರಂಗಭೂಮಿ ನಟರಾದ ಶ್ರೀ ಮುಖ್ಯಮಂತ್ರಿ ಚಂದ್ರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಧಕರ ಸನ್ಮಾನ ನಡೆಯಲಿದ್ದು ಏಕಲವ್ಯ ಪ್ರಶಸ್ತಿ ಪುರಸ್ಕೃತ ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಶ್ರೀ ಪ್ರಶಾಂತ್ ರೈ ಕೈಕಾರ, ಕರ್ನಾಟಕ ಯಕ್ಷರಂಗಾಯಣ ಕಾರ್ಕಳ ಇದರ ನಿರ್ದೇಶಕರಾದ ಶ್ರೀ ಜೀವನ್ ರಾಂ ಸುಳ್ಯ ಹಾಗೂ ಯೋಗಾಸನದಲ್ಲಿ ರಾಷ್ಟ್ರೀಯ ದಾಖಲೆಗೈದ ಶ್ರೀ ಮೋನಿಷ್ ತಂಟೆಪ್ಪಾಡಿ ಇವರುಗಳನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದ ಗೌರವ ಉಪಸ್ಥಿತಿಯಲ್ಲಿ ಅಮರಮುಡ್ನೂರು ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಪದ್ಮಪ್ರಿಯ, ಕಳಂಜ ಗ್ರಾ.ಪಂ.ಅಧ್ಯಕ್ಷ ಶ್ರೀ ಪ್ರಶಾಂತ್ ಕುಮಾರ್ ಕಿಲಂಗೋಡಿ, ಬಾಳಿಲ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಸವಿತಾ ಗುರುರಾಜ್ ಚಾಕೋಟೆಡ್ಕ, ಅಮರಮುಡ್ನೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀ ಆಕಾಶ್.ಕೆ, ಕಳಂಜ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀ ಶ್ರೀಧರ್.ಕೆ.ಆರ್, ಬಾಳಿಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀ ಹೂವಪ್ಪ ಗೌಡ.ಬಿ ಇರಲಿದ್ದಾರೆ. ಕಾರ್ಯಕ್ರಮವನ್ನು ರಂಗಕರ್ಮಿ, ಸಾಂಸ್ಕೃತಿಕ ಸಂಘಟಕರಾದ ಶ್ರೀ ಶ್ರೀನಿವಾಸ.ಜಿ ಕಪ್ಪಣ್ಣ ರವರು ಸಂಯೋಜಿಸಲಿದ್ದಾರೆ. ಬಳಿಕ ಕರ್ನಾಟಕ ಹವ್ಯಾಸಿ ರಂಗಭೂಮಿಯ ಮಹತ್ತರ ದಾಖಲೆಯ ‘ಕಲಾಗಂಗೋತ್ರಿ’ ಅಭಿನಯಿಸುವ, ಡಾ.ಬಿ.ವಿ.ರಾಜಾರಾಂ ನಿರ್ದೇಶಿಸಿದ, “ಮುಖ್ಯಮಂತ್ರಿ” ನಾಟಕ ಪ್ರದರ್ಶನಗೊಳ್ಳಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾಸಕ್ತರು ಭಾಗಿಗಳಾಗುವಂತೆ ನಿನಾದ ಸಾಂಸ್ಕೃತಿಕ ಕೇಂದ್ರದ ಮುಖ್ಯಸ್ಥ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ವಿನಂತಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!