ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹರಿಹರ ಪಲ್ಲತ್ತಡ್ಕ ಒಕ್ಕೂಟದ 2022-23ನೇ ಸಾಲಿನ ಮುಂದಿನ 3 ವರ್ಷಗಳ ಅವಧಿಗೆ ನೂತನ ಒಕ್ಕೂಟವನ್ನು ಎ.10 ರಂದು ಬಾಲಸುಬ್ರಹ್ಮಣ್ಯ ಎಲ್ಲಪಡ್ಕ ಇವರ ಅಧ್ಯಕ್ಷತೆಯಲ್ಲಿ ರಚನೆ ಮಾಡಲಾಯಿತು.
ಒಕ್ಕೂಟದ ನೂತನ ಅಧ್ಯಕ್ಷರಾಗಿ ಹರ್ಷ ಗೌಡ ಪಾಲ್ತಾಡು, ಉಪಾಧ್ಯಕ್ಷರಾಗಿ ಮೋಹನ್ ದಾಸ್ ಬಟ್ಟೋಡಿ, ಕಾರ್ಯದರ್ಶಿಯಾಗಿ ಗಿರೀಶ್ ಹೆರಕಜೆ, ಜೊತೆ ಕಾರ್ಯದರ್ಶಿಯಾಗಿ ಗೀತಾ ಹರಿಹರ, ಕೋಶಾಧಿಕಾರಿಯಾಗಿ ಸುಬ್ರಹ್ಮಣ್ಯ ಕರಂಗಲ್ಲು ಇವರುಗಳು ಆಯ್ಕೆಯಾದರು.
ಹಾಗೂ ನೂತನ ಉಪಸಮಿತಿಯ ಸದಸ್ಯರುಗಳಾಗಿ ವಸಂತ, ಸೋಮಶೇಖರ, ರಜನಿ, ಪ್ರತಿಮಾ, ಶಾರದಾ ಇವರುಗಳು ಆಯ್ಕೆಯಾದರು.
ಹಾಗೂ ನೂತನ ದಾಖಲಾತಿ ಸಮಿತಿಯ ಸದಸ್ಯರುಗಳಾಗಿ ಜಯಂತ ಕಜ್ಜೋಡಿ, ಭಾರತಿ ಕಲ್ಲೇಮಠ, ನವೀನ್ ಕೊಪ್ಪಡ್ಕ ಇವರುಗಳು ಆಯ್ಕೆಯಾದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ಸೀತಾರಾಮ ಕಾನಾವು ಮಾಹಿತಿ ನೀಡಿದರು.
ಪ್ರಭಾಕರ ಕಜ್ಜೋಡಿ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಸೇವಾಪ್ರತಿನಿಧಿ ರೇಖಾ ಹಾಗೂ ಒಕ್ಕೂಟದ ಪದಾಧಿಕಾರಿಗಳು, ಪ್ರಬಂಧಕರು, ಸಂಯೋಜಕರು, ಕೋಶಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ