Ad Widget

ಕಸ ಸಂಗ್ರಹಣೆಯಲ್ಲಿ ಮಾದರಿಯಾದ ಅರಂತೋಡು ಪಂಚಾಯತ್; ಸ್ವಸಹಾಯ ‌ಮಹಿಳೆಯರಿಂದಲೇ ಕಸ ವಿಲೇವಾರಿ

ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಪಂಚಾಯತ್ ಇಂದು ಕಸ ಸಂಗ್ರಹಣೆಯಲ್ಲಿ ಮಾದರಿಯಾಗಿ ಹೊರಹೊಮ್ಮಿದೆ. ಗ್ರಾಮದ ಸ್ವಸಹಾಯ ಸಂಘದ ಮಹಿಳೆಯರು ಸ್ವ-ಇಚ್ಛೆಯಿಂದಲೇ ಕಸ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದಾರೆ. ಸ್ವಚ್ಚತೆಗಾಗಿ 2019ರ ಪರಿಸರ ಪ್ರಶಸ್ತಿಯನ್ನು ಈ ಗ್ರಾಮ ಪಂಚಾಯತ್ ಸ್ವಚ್ಛತಾ ಪಾಲನೆಯಲ್ಲಿ ಮುಂಚೂಣಿಯಲ್ಲಿದೆ.

. . . . . . .

ಸ್ವಸಹಾಯ ಸಂಘದ ಮೂಲಕ ಪಂಚಾಯತಿನ ಕಸ ನಿರ್ವಹಣೆ
ಜಿಲ್ಲೆಯಲ್ಲಿ ಒಟ್ಟು 37 ಘನ ತ್ಯಾಜ್ಯ ಘಟಕಗಳು ಕಾರ್ಯಾಚರಿಸುತ್ತಿದ್ದು, ಇದರಲ್ಲಿ ಸುಳ್ಯದ ಅರಂತೋಡು ಪಂಚಾಯತ್ ನಲ್ಲಿ ಮನೆ-ಮನೆಗಳಿಂದ ತ್ಯಾಜ್ಯ ಸಂಗ್ರಹ ಅಭಿಯಾನ ನಡೆಸುತ್ತಿದೆ. ಈ ಪಂಚಾಯತ್ ನಲ್ಲಿ ಕಸ ಸಂಗ್ರಹ, ವಾಹನ ಚಾಲನೆ, ಮತ್ತು ಕಸವನ್ನು ವ್ಯಾವಸಾಯಿಕ ರೀತಿಯಲ್ಲಿ ಮರುಬಳಕೆ ಮಾಡುವ ಕೆಲಸವನ್ನು ಮಾಡುತ್ತಿರುವುದು ಒಂದು ಮಹಿಳಾ ಸ್ವ-ಸಹಾಯ ತಂಡ. ತಮ್ಮ ಈ ಕಾರ್ಯಕ್ಕೆ ಗ್ರಾಮದ ಜನರು ಒಳ್ಳೆಯ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ ಎಂದು ಈ ತಂಡದ ಮೇಲ್ವಿಚಾರಕಿ ಸೌಮ್ಯಲತಾ ಹೇಳಿದ್ದಾರೆ.

ಅರಂತೋಡು ಗ್ರಾಮ ಪಂಚಾಯತ್ ನಲ್ಲಿ ಸ್ವ ಸಹಾಯ ಸಂಘಗಳ ಅಧಿನಿಯಮ ಪ್ರಕಾರ ಆಗಿರುವ ಘನ ಮತ್ತು ದ್ರವಸಂಪನ್ಮೂಲ ನಿರ್ವಹಣಾ ಸಂಘ (ರಿ ) ಎಂಬ ಹೆಸರಿನ 5 ಜನ ಮಹಿಳಾ ಸದಸ್ಯರ ತಂಡವು ಗ್ರಾಮ ಪಂಚಾಯತ್ ನಲ್ಲಿ ಸ್ವಚ್ಛತಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಬಂದಿದ್ದಾರೆ. ಮಹಿಳೆಯರೇ ಈ ಎಲ್ಲಾ ಕಾರ್ಯವನ್ನು ನಿಭಾಯಿಸುತ್ತಿದ್ದಾರೆ. ಸುಮಲತಾ ಎಂಬವರು ವಾಹನ ಚಾಲನಾ ತರಬೇತಿ ಪಡೆದಿದ್ದು, ಕಸ ಸಾಗಾಟದ ವಾಹನವನ್ನು ಚಲಾಯಿಸುತ್ತಾರೆ. ವಿಜಯಲಕ್ಷ್ಮಿ, ಶಾಲಿನಿ, ಜಲಜಾಕ್ಷಿ ಎಂಬ ಸದಸ್ಯರು ಸ್ವಚ್ಛತಾ ತಂಡದಲ್ಲಿದ್ದಾರೆ.

ಸಂಗ್ರಹ ಮಾಡಿದ ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ ಗೊಬ್ಬರ ತಯಾರಿ ಮಾಡಲಾಗುತ್ತದೆ. ಇದರಿಂದ ಬರುವ ಆದಾಯವನ್ನು ಸಂಬಳದ ರೀತಿಯಲ್ಲಿ ಬಳಸಿಕೊಳ್ಳುತ್ತಿರುವ ಸದಸ್ಯೆಯರಿಗೆ ಆದಾಯದಲ್ಲಿ ಕಡಿಮೆಯಾದರೆ ಪಂಚಾಯತ್ ಮೂಲಕ ಬಾಕಿ ಹಣ ನೀಡಲಾಗುತ್ತದೆ. ಒಟ್ಟಾರೆ ಈ ಮಹಿಳಾ ಸ್ವಸಹಾಯ ಸಂಘದ‌ ಸದಸ್ಯೆಯರ ಕಾರ್ಯ ತಾಲೂಕು ಹಾಗೂ ಜಿಲ್ಲೆಗೆ ಮಾದರಿ ಎನಿಸಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!