Ad Widget

ಸುಳ್ಯ: ಅಂಬೇಡ್ಕರ್ ರಕ್ಷಣಾ ವೇದಿಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಂಬೇಡ್ಕರ್ ಜಯಂತಿ ಪ್ರಯುಕ್ತ ಮಹಾ ರಕ್ತದಾನ ಶಿಬಿರ

ಅಂಬೇಡ್ಕರ್ ರಕ್ಷಣಾ ವೇದಿಕೆ ಚಾರಿಟೇಬಲ್ ಟ್ರಸ್ಟ್ (ರಿ.) ಸುಳ್ಯ ದ.ಕ .ಇದರ ವತಿಯಿಂದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮದಿನದ ಅಂಗವಾಗಿ ಮಹಾ ರಕ್ತದಾನ ಶಿಬಿರ ಸುಳ್ಯ ಅಂಬೇಡ್ಕರ್ ಭವನದಲ್ಲಿ ಏ.14 ಗುರುವಾರದಂದು ನಡೆಯಿತು. ಕಾರ್ಯಕ್ರಮವನ್ನು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಹರೀಶ್ ಬಂಟ್ವಾಳ ದೀಪ ಬೆಳಗಿಸಿ ಉದ್ಘಾಟಿಸಿದರು.

. . . . . . . . .

ನ್ಯಾಯವಾದಿಗಳಾದ ಪ್ರದೀಪ್ ಕುಮಾರ್ ಅವರು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ತಹಶೀಲ್ದಾರ್ ಕುಮಾರಿ ಅನಿತಾಲಕ್ಷ್ಮೀ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ, ರೋಟರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ರತನ್ ಬಳ್ಳಕ್ಕ, ಎಸ್.ಎಸ್.ಎಫ್ ಬ್ಲಡ್ ಸೈಟೋ ದಕ್ಷಿಣ ಕನ್ನಡದ ಸಿದ್ದಿಕ್ ಗೂನಡ್ಕ, ಸುದ್ದಿ ಬಿಡುಗಡೆ ವರದಿಗಾರ ಹಸೈನಾರ್ ಜಯನಗರ, ಅಕ್ಷಯ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಕರೀಮ್ ಕೆದ್ದಾರ್, ಸತೀಶ್ ಬೂಡುಮಕ್ಕಿ ಅಧ್ಯಕ್ಷರು ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಸುಳ್ಯ, ಮೋಹನ್ ಕುಮಾರ್ ಅಡ್ಕಬಳೆ ಅಧ್ಯಕ್ಷರು ಅಂಬೇಡ್ಕರ್ ರಕ್ಷಣಾ ವೇದಿಕೆ ಸುಳ್ಯ, ಪರಮೇಶ್ವರ ಕೆಮ್ಮಿಂಜೆ ಜಿಲ್ಲಾ ಸಂಚಾಲಕರು ಅಂಬೇಡ್ಕರ್ ರಕ್ಷಣಾ ವೇದಿಕೆ, ಶ್ರೀಮತಿ ಸುಮಿತ್ರ ಪಾಟಾಜೆ ಮಹಿಳಾ ಅಧ್ಯಕ್ಷರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ರಕ್ಷಣಾ ವೇದಿಕೆ ಚಾರಿಟೇಬಲ್ ಟ್ರಸ್ಟ್ ನ ಪಿ.ಸುಂದರ ಪಾಟಾಜೆ ವಹಿಸಿದ್ದರು. “ರಕ್ತದಾನ ಶ್ರೇಷ್ಠದಾನ” ಎಂಬ ಧ್ಯೇಯದೊಂದಿಗೆ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ, ಕೆಪಿಸಿ ಸಿಬ್ಬಂದಿ ಅಪ್ಪು, ಶ್ರಾವಣ ನಗರ ಪಂಚಾಯತ್ ಸಿಬ್ಬಂದಿ ದೇವಿ, ಕೆವಿಜಿ ಸಿಬ್ಬಂದಿ ಸತೀಶ ಜಬಲೆ, ಸತೀಶ ಬೂಡುಮಕ್ಕಿ ಹಾಗೂ ಇನ್ನೂ ಹಲವಾರು ಜನ ರಕ್ತದಾನ ಮಾಡಿದರು.

. . . . . . .

ಕಾರ್ಯಕ್ರಮದಲ್ಲಿ ಯೆನೆಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ದೇರಳಕಟ್ಟೆ ಇಲ್ಲಿನ ವೈದ್ಯರನ್ನು ವೇದಿಕೆಗೆ ಕರೆದು ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗಣೇಶ ಪಾಟಾಜೆ ಸ್ವಾಗತಿಸಿ, ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading