
ಪ್ರಾದೇಶಿಕ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ “ಶೀಲ ಮತ್ತು ಶಿಸ್ತಿ”ನ ತಳಹದಿಯಲ್ಲಿ ಹುಟ್ಟಿಕೊಂಡ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸುಳ್ಯ ತಾಲೂಕು ಘಟಕವು ಸ್ಥಾಪನೆಯಾಗಿದ್ದು ಇದರ ಅಧ್ಯಕ್ಷರಾಗಿ ಬೆಳ್ಳಾರೆ ಹೋಬಳಿಯ ಜನಪ್ರಿಯ ಸಮಾಜಸೇವಕರಾದ ಸದಾಶಿವ ಪೂಜಾರಿಯವರನ್ನು ಆಯ್ಕೆ ಮಾಡಲಾಗಿದೆ. ಇವರನ್ನು ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾಗಿ ಮಾನ್ಯ ಸುಬ್ರಹ್ಮಣ್ಯ ಭಟ್ ಬೆಳ್ತಂಗಡಿರವರ ಸೂಚನೆಯಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಅಲೆಕ್ಸಾಂಡರ್ ರವರು ನೇಮಕಗೊಳಿಸಿದ್ದಾರೆ.