Ad Widget

ಏಪ್ರಿಲ್ 22 ರಿಂದ 26 ರವರೆಗೆ ಕುಕ್ಕುಜಡ್ಕ ಶ್ರೀ ವಿಷ್ಣುಮೂರ್ತಿ, ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಬಲ್ಲಾಳರು ಆರಾಧನೆ ಮಾಡಿಕೊಂಡು ಬರುತ್ತಿದ್ದ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕುಕ್ಕುಜಡ್ಕದ ಶ್ರೀ ವಿಷ್ಣುಮೂರ್ತಿ, ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದ್ದು ಸುಮಾರು 1 ವರೆ ಕೋಟಿಗೂ ಮಿಕ್ಕಿದ ಖರ್ಚಿನಲ್ಲಿ ಸಂಪೂರ್ಣ ಕೆಲಸ ಕಾರ್ಯ ನಡೆದು ಏ. 22 ರಿಂದ ಪ್ರಾರಂಭವಾಗಿ ಏ. 26 ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿದೆ ಬ್ರಹ್ಮಕಲಶೋತ್ಸವ ನೆರವೇರಲಿದೆ ಎಂದು ಆಡಳಿತ ಸಮಿತಿಯ ಪ್ರಮುಖರಾದ ಎಂ.ಜಿ.ಸತ್ಯನಾರಾಯಣ ಹೇಳಿದರು.
ಅವರು ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದೈವಸ್ಥಾನದ ಹಿನ್ನೆಲೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು.
ಅಮರಮೂಡೂರು ಗ್ರಾಮದ ಕುಕ್ಕುಜಡ್ಕದಲ್ಲಿ ಸುಮಾರು 3.26 ಎಕ್ರೆ ವಿಸ್ತೀರ್ಣದಲ್ಲಿದ್ದು ಕಾರಣೀಕ ಕ್ಷೇತ್ರವಾಗಿದೆ. ಕಳೆದ 67 ವರ್ಷಗಳಿಂದ ಕುಂಭ ಮಾಸ 25 ರಿಂದ 30 ರತನಕ ಗಣಹವನ, ಸಾಮೂಹಿಕ ಸತ್ಯ ನಾರಾಯಣ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಸಿಕೊಂಡು ಬರುತ್ತಿದ್ದಾರೆ. ರಕ್ತೇಶ್ವರಿ ದೈವ, ಧರ್ಮಸ್ಥಳ ಪಂಜುರ್ಳಿ ಮತ್ತು ಜಾವತೆ ದೈವ, ಮಂತ್ರವಾದಿ ಗುಳಿಗ ಮತ್ತು ರಕ್ರೇಶ್ವರ ಗುಳಿಗ ದೈವ, ಕಲ್ಲುರ್ಟಿ, ಕಲ್ಕುಡ ಮತ್ತು ಅಂಗಾರ ಬಾಕುಡ ದೈವಗಳ ನರ್ತನ ಹಾಗೂ ಶ್ರೀ ವಿಷ್ಣುಮೂರ್ತಿ ದೈವದ ಕೋಲದ ಸೇವೆಗಳನ್ನು ನಡೆಸಲಾಗುತ್ತಿತ್ತು.

. . . . . . .

1766 ರಲ್ಲಿ ಕೆಳದಿಯ ಇಕ್ಕೇರಿಯ ರಾಜ, ಶಿವಪ್ಪ ನಾಯಕರ ನೇಮಕಾತಿಯಂತೆ ಹಿಂದೆ ಬಲ್ಲಾಳ ರು ಆರಾಧನೆ ಮಾಡಿಕೊಂಡು ಬರುತ್ತಿದ್ದ ಈ ಅಮರಮಾಗಣೆಯ (ಅಮರ ಮೂನ್ನೂರು, ಪಡೂರು, ಜೊಕ್ಕಾಡಿ) ಪರಿಸರದ ದೇವಸ್ಥಾನ, ದೈವಸ್ಥಾನಗಳ ನಿತ್ಯ ನೈಮಿಥ್ಯಗಳನ್ನು ನಡೆಸಿಕೊಂಡು ಬರಲು ಪ್ರಾರಂಭವಾಗಿದೆ. 1850 ರಿಂದ ಕೆ. ಗೋಪಾಲಯ್ಯನವರ ಕುಟುಂಬದವರು ಆರಾಧನೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ದಿನಾಂಕ 01-7-1954 ರಿಂದ ಕುಕ್ಕುಜಡ್ಕದಲ್ಲಿ ದೈವಸ್ಥಾನದ ಗುಡಿ ನಿರ್ಮಾಣವಾಗಿ ಇದಕ್ಕೆ ಸಂಬಂಧಿಸಿರುವ ಎಲ್ಲಾ ದೈವಗಳಿಗೆ ವಾರ್ಷಿಕವಾಗಿ ಸೇವೆಗಳು ಪ್ರಾರಂಭವಾಯಿತು.
ಇದೀಗ 1954 ರಲ್ಲಿ ನಿರ್ಮಾಣ ಮಾಡಿರುವ ದೈವಸ್ಥಾನದ ಗುಡಿ ಮತ್ತು ಕಟ್ಟಡಗಳು ಶಿಥಿಲವಾಗಿರುವುದನ್ನು ಮನಗಂಡು ನವೀಕರಣಗೊಳಿಸುವ ನಿರ್ಧಾರ ಮಾಡಲಾಯಿತು. ಇದರಂತೆ 2017 ರಲ್ಲಿ ಪ್ರಶ್ನೆ ಚಿಂತನೆ ನಡೆಸಿ ಜೀರ್ಣೋದ್ಧಾರ ಮಾಡುವುದಾಗಿ ತೀರ್ಮಾನಿಸಲಾಯಿತು.ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಂತೆ
ಸಪರಿವಾರ ಶ್ರೀ ರಕ್ರೇಶ್ವರಿ ದೈವದ ಗುಡಿ, ಶ್ರೀ ವಿಷ್ಣುಮೂರ್ತಿ ದೈವದ ಗುಡಿ, ಕಾರ್ಯಾಲಯ, ದಾಸ್ತಾನು ಕೊಠಡಿ, ಪಾಕಶಾಲೆ, ಅನ್ನದಾನ ಪ್ರಾಂಗಣ, ದೈವಗಳ ಸೇವಕವೃಂದಕ್ಕೆ ವಿಶ್ರಾಂತಿಗೃಹ, ಸಭಾವೇದಿಕೆ, ಶೌಚಾಲಯ, ಸ್ನಾನಗೃಹ, ಮಹಾದ್ವಾರ, ನೀರಿನ ಟ್ಯಾಂಕ್ ಮತ್ತು ವಿದ್ಯುತ್ ವ್ಯವಸ್ಥೆಯ ಕಾರ್ಯಗಳು ಮುಕ್ತಾಯ ಹಂತದಲ್ಲಿದೆ. ಏ.24 ರಂದು ಬೆಳಿಗ್ಗೆ ಗಂಟೆ 8-24 ರಿಂದ 9-30 ರ ವೃಷಭ ಲಗ್ನದಲ್ಲಿ ಪ್ರತಿಷ್ಠಾಪನಾ ಹಾಗೂ ಕಲಶಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳು ನೀಲೇಶ್ವರದ ಬ್ರಹ್ಮಶ್ರೀ ಕೆ. ಯು. ಪದ್ಮನಾಭ ತಂತ್ರಿಗಳು, ಆರೋತ್ ವಾಸ್ತುಶಿಲ್ಪಿ ಕೃಷ್ಣ ಪ್ರಸಾದ ಮುನಿಯಂಗಳ ಹಾಗೂ ಪ್ರಸನ್ನ ಮುಳಿಯಾಲ ಇವರ ಮಾರ್ಗದರ್ಶನದಲ್ಲಿ ನೆರವೇರಲಿದೆ. ಗುಡಿಯ ಕೆಲಸಕಾರ್ಯವನ್ನು ವಿಶ್ವನಾಥ ಮೇಸ್ತ್ರಿ, ಸಾಲೆತ್ತೂರು, ಮರದ ಕೆಲಸಗಳನ್ನು ಜನಾರ್ಧನ ಆಚಾರ್ಯ ಕುಂಟಿಕಾನ ತಂಡ ಹಾಗೂ ಬೆಳ್ಳಿ ಆಭರಣಗಳ ಕೆಲಸಗಳನ್ನು ಕಾರ್ಕಳದ ಹರೀಶ ಕೆ ನಾಯಕ ಮಿಯ್ಯಾರು ಮಾಡಿದ್ದಾರೆ. ಭಕ್ತವೃಂದದವರು ಕರಸೇವೆ ಮೂಲಕ ಸಕಲ ಕಾರ್ಯಗಳಲ್ಲಿ ದಿನನಿತ್ಯ ಕೈಜೋಡಿಸುತ್ತಿರುವುದರಿಂದ ಧಾರ್ಮಿಕ ಕೇಂದ್ರದ ಕಾಮಗಾರಿಗಳು ವೇಗವಾಗಿ ನಡೆಸುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಹ್ಮಕಲಶೋತಗಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಆಡಳಿತ ಸಮಿತಿಯ ಎಂ.ಎಸ್ ಶ್ರೀಶ ಕುಮಾರ್, ಎಂ.ಎಸ್ ಹರ್ಷಕುಮಾರ್ ಹಾಗೂ ಪ್ರಕಾಶ್ ಎಂ.ಎಸ್., ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಭಾರ್ಗವ ಬಿ.ಎನ್. ಉಪಸ್ಥಿತರಿದ್ದರು.

ಭರದಿಂದ ನಡೆಯುತ್ತಿರುವ ಜೀರ್ಣೋದ್ಧಾರ ಕಾರ್ಯ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!