ಕಳಂಜ ಗ್ರಾಮದ ಪಾಂಡಿಪಾಲ್- ತಂಟೆಪ್ಪಾಡಿ- ಕೀಲಂಗೋಡಿ ರಸ್ತೆಯ 50 ಲಕ್ಷ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮವು ಏ.09ರಂದು ನಡೆಯಿತು. ಕರ್ನಾಟಕ ಸರ್ಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಗುದ್ದಲಿ ಪೂಜೆ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರು ಹಿರಿಯರಾದ ಅಣ್ಣಾ ವಿನಯಚಂದ್ರ, ಪ್ರಮುಖರಾದ ಹರೀಶ್ ಕಂಜಿಪಿಲಿ, ಶ್ರೀನಾಥ್ ರೈ ದೊಳ್ತೋಡಿ, ಸುನಿಲ್ ಕೇರ್ಪಳ, ಕಳಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಕಿಲಂಗೋಡಿ, ಸದಸ್ಯರಾದ ಬಾಲಕೃಷ್ಣ ಬೇರಿಕೆ, ಕಮಲ ಮುಂಡುಗಾರು ಹಾಗೂ ಪ್ರೇಮಲತಾ ಮಣಿಮಜಲು, ಊರವರಾದ ಬಾಳಪ್ಪ ಕಳಂಜ, ಅಜಿತ್ ರಾವ್ ಕಿಲಂಗೋಡಿ, ಮೇದಪ್ಪ ಗೌಡ ತಂಟೆಪ್ಪಾಡಿ, ಲಿಂಗಪ್ಪ ಗೌಡ ತಂಟೆಪ್ಪಾಡಿ, ಕರುಣಾಕರ ಶೆಟ್ಟಿ ನಾಲ್ಗುತ್ತು, ಲೋಕೇಶ್ ತಂಟೆಪ್ಪಾಡಿ, ಶುಭಕುಮಾರ್ ಬಾಳೆಗುಡ್ಡೆ, ಚಂದ್ರ ಗೌಡ ಕಜೆಮೂಲೆ, ನವೀನ್ ತಂಟೆಪ್ಪಾಡಿ, ಆನಂದ ಗೌಡ ತಂಟೆಪ್ಪಾಡಿ, ತಿಲಕ್ ತಂಟೆಪ್ಪಾಡಿ, ಮಾಧವ ಗೌಡ ಕಜೆಮೂಲೆ, ಶಿವಪ್ರಸಾದ್ ಕಳಂಜ ಮತ್ತಿತರರು ಉಪಸ್ಥಿತರಿದ್ದರು.