ಬಾರ್ ಅಸೋಸಿಯೇಷನ್ ಸುಳ್ಯದ 2022-2024ರ ಪದಗ್ರಹಣ ಸಮಾರಂಭ ಏ.6 ರಂದು ಸುಳ್ಯದ ತಾಲೂಕು ವಕೀಲರ ಸಂಘದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಆಡಿಷನಲ್ ಅಡ್ವೊಕೇಟ್ ಜನರಲ್ ಅರುಣ್ ಶ್ಯಾಮ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಂಗ ವೃತ್ತಿಯು ಸತ್ಯ ಮತ್ತು ನ್ಯಾಯದ ಪರ ಇರುತ್ತದೆ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಬದಲಾವಣೆ ತರಿಸುವಂತದ್ದು ನ್ಯಾಯಾಧೀಶರಾಗಿರುತ್ತಾರೆ. ಇದರಿಂದಾಗಿ ಸ್ಥಳೀಯರ ಸಮಸ್ಯೆಗಳ ಪರಿಹರಿಸಿಕೊಳ್ಳುವ ದೃಷ್ಟಿಯಿಂದ ಸ್ಥಳೀಯರನ್ನೇ ಆಯ್ಕೆ ಮಾಡಿಕೊಂಡಾಗ ಸಂಘದ ಬೆಳವಣಿಗೆ ಹಾಗೂ ಹೊಸ ಆಡಳಿತ ಅಭಿವೃದ್ಧಿಗೆ ಸಹಕಾರಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ಗಣೇಶಾನಂದ ಸೋಮಯಾಜಿ, ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಪ್ರಸಾದ್ ಕೆ.ಎಸ್, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ, , ಜೆಎಂಎಫ್ ಸಿ ಸುಳ್ಯ ಮತ್ತು ಸಿವಿಲ್ ನ್ಯಾಯಾಧೀಶ ಯಶವಂತಕುಮಾರ್ ಕೆ. ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಗೌರವ ಅತಿಥಿಯಾದ ಬಾರ್ ಅಸೋಸಿಯೇಶನ್ ಸುಳ್ಯದ ನಿಕಟಪೂರ್ವ ಅಧ್ಯಕ್ಷ ಎಂ ವೆಂಕಪ್ಪ ಗೌಡ, ಅಧ್ಯಕ್ಷತೆ ವಹಿಸಿದ ಸುಳ್ಯದ ವಕೀಲರ ಸಂಘದ ಅಧ್ಯಕ್ಷ ನಾರಾಯಣ ಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಕೋಶಾಧಿಕಾರಿ ಜಗದೀಶ ಡಿ.ಪಿ, ಜೊತೆ ಕಾರ್ಯದರ್ಶಿ ಪಲ್ಲವಿ ಕೆ.ವಿ, ಹರ್ಷಿತ್ ಕಾರ್ಜ, ಅಬೂಬಕ್ಕರ್, ಸತೀಶ್ ಕೊಂಬಕೋಡ್ ಉಪಸ್ಥಿತರಿದ್ದರು.
ವಕೀಲರಾದ ಪಲ್ಲವಿ ಮತ್ತು ರಕ್ಷಿತಾ ಪ್ರಾರ್ಥಿಸಿ, ಉಪಾಧ್ಯಕ್ಷ ದೀಪಕ್ ಕುತ್ತಮೊಟ್ಟೆ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ವಿನಯ್ ಕುಮಾರ್ ಮುಳುಗಾಡು ವಂದಿಸಿ, ಸುಬ್ರಾಯ ಭಟ್ ನಿರೂಪಿಸಿದರು.