ಸುಳ್ಯದ ನಾಡಹಬ್ಬಗಳ ದಿನಾಚರಣಾ ಸಮಿತಿಯ ಆಶ್ರಯದಲ್ಲಿ ಹಸಿರು ಕ್ರಾಂತಿಯ ಹರಿಕಾರ ಮತ್ತು ಮಾಜಿ ಉಪಪ್ರಧಾನಿ ಡಾ| ಬಾಬು ಜಗಜೀವನ್ ರಾಂ ರವರ 115ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಏ.5ರಂದು ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆಯಿತು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಮಾಜದಲ್ಲಿ ನಾವೆಲ್ಲ ಸಮಾನವಾಗಿ ಬದುಕಬೇಕು ಎಂದು ಶ್ರಮವಹಿಸಿದವರಲ್ಲಿ ಡಾ| ಬಾಬು ಜಗಜೀವನ್ ರಾಂ ಒಬ್ಬರು. ಹಿಂದೂ, ದಲಿತ ವಿಚಾರದಲ್ಲಿ ತಂದಿರುವ ಕಾನೂನುಗಳು ಇಂದು ಪರಿಣಾಮಕಾರಿಯಾಗಿ ಬಂದಿದೆ ಹಾಗೂ ಅವರು ದೇಶದ ರಕ್ಷಣೆ ಹಾಗೂ ಸ್ವಾವಲಂಬನೆ ಕೆಲಸದಿಂದ ಇಂದು ಸಮಾಜ ಎಲ್ಲಾ ವಿಚಾರದಲ್ಲೂ ಅಭಿವೃದ್ಧಿ ಹೊಂದಿದೆ ಎಂದರು.
ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯದ ಶಿಕ್ಷಕಿ ಚಂದ್ರಮತಿ ಅವರು ಡಾ| ಬಾಬು ಜಗಜೀವನ್ ರಾಂ ಜನ್ಮ ದಿನಾಚರಣೆಯ ಕುರಿತು ಉಪನ್ಯಾಸ ಭಾಷಣ ಮಾಡಿದರು. ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್., ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಎಸ್ ಅತಿಥಿ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರರು ಕು. ಅನಿತಾಲಕ್ಷ್ಮೀ ಎಸ್, ಸುಳ್ಯ ನಗರ ಪಂಚಾಯತು ಸರ್ವ ಸದಸ್ಯರು ಮತ್ತು ಸುಳ್ಯ ತಾಲೂಕಿನ ಎಲ್ಲಾ ಗ್ರಾ ಪಂ ಅಧ್ಯಕ್ಷರು/ಸದಸ್ಯರು ಮತ್ತು ತಾಲೂಕಿನ ಪ, ಜಾತಿ, ಪ. ಪಂಗಡದ ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಂದಿನಿ ಪ್ರಾರ್ಥಿಸಿ, ವಸತಿ ನಿಲಯ ಮೇಲ್ವಿಚಾರಕ ಮಾಧವ ಸ್ವಾಗತಿಸಿ, ಶಿಕ್ಷಣ ಸಂಯೋಜಕ ಚಂದ್ರಶೇಖರ ನಿರೂಪಿಸಿದರು.