


ಐನೆಕಿದು ಗ್ರಾಮದ ಕೆದಿಲ ಶಶಿಧರ್ ರವರ ತೋಟಕ್ಕೆ ಆನೆ ದಾಳಿ ನಡೆಸಿದ ಘಟನೆ ಇಂದು ಬೆಳಗಿನ ಜಾವ 5.30ಕ್ಕೆ ಸಂಭವಿಸಿದೆ. ಎರಡು ದಿವಸಗಳ ಹಿಂದೆ ಇದೇ ಗ್ರಾಮದ ರವಿ ಕೆದಿಲರವರ ತೋಟಕ್ಕೆ ಆನೆ ದಾಳಿ ಮಾಡಿದ್ದು ಇದರಿಂದ ಕೃಷಿಗೆ ಸಾಕಷ್ಟು ಹಾನಿಯಾಗಿತ್ತು. ಇದೀಗ ಆನೆ ದಾಳಿ ಈ ಪ್ರದೇಶದಲ್ಲಿ ಹೆಚ್ಚಾಗುತ್ತಿದ್ದು ಕೃಷಿಗೆ ವ್ಯಾಪಕ ಹಾನಿಯಾಗುತ್ತಿದೆ.