ಅರಂತೋಡಿನಲ್ಲಿ ಅನಿಲ್ ಕುಮಾರ್ ಬಿಳಿಯಾರು ಅವರ ಮಾಲೀಕತ್ವದಲ್ಲಿ ಖುಷಿ ಬೇಕರಿ ಏ.2 ರಂದು ಶುಭಾರಂಭಗೊಂಡಿತು. ಬೇಕರಿಯನ್ನು ಅರಂತೋಡು ಪ್ರಾ. ಕೃ. ಪ. ಸ. ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಉದ್ಘಾಟಿಸಿದರು. ಸುಳ್ಯದ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಯು.ಎಂ., ಅರಂತೋಡು ಮಲ್ಲಿಕಾರ್ಜುನ ಭಜನಾ ಮಂಡಳಿಯ ಅಧ್ಯಕ್ಷ ಕೆ.ಆರ್. ಪದ್ಮನಾಭ, ತೊಡಿಕಾನ ಪ್ರಾ. ಕೃ. ಪ. ಸ. ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ, ಅರಂತೋಡಿನ ಅಳಿಕೆ ಕಾಂಪ್ಲೆಕ್ಸ್ ನ ಮಾಲಕ ಎ. ಕೆ. ಗೋಪಾಲ ಉಪಸ್ಥಿತರಿದ್ದರು.
- Thursday
- November 21st, 2024