ಅರಂತೋಡು ಗ್ರಾಮ ಪಂಚಾಯತ್ ಘನತ್ಯಾಜ್ಯ ನಿರ್ವಹಣೆಯನ್ನು ಮಾಡುತ್ತಿರುವ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಸಂಘದ ಮಹಿಳಾ ತಂಡವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮ ಮಹಿಳಾ ಘನತ್ಯಾಜ್ಯ ನಿರ್ವಹಣಾ ತಂಡವಾಗಿರುತ್ತದೆ. ಏ.3 ರಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ರವರು ಮಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಿದ್ದಾರೆ. ಘನ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡುತ್ತಿರುವ ರಾಜ್ಯದ 50 ಮಾದರಿ ಗ್ರಾಮ ಪಂಚಾಯತ್ ಗಳಲ್ಲಿ ಒಂದಾಗಿರುವ ಅರಂತೋಡು ಗ್ರಾಮ ಪಂಚಾಯತ್ ನ ಸಾಧನೆಗೆ ಸಂದ ಗೌರವವಾಗಿದೆ.
- Thursday
- November 21st, 2024