
ಅಂಬೇಡ್ಕರ್ ರಕ್ಷಣಾ ವೇದಿಕೆ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಏ.1 ರಂದು ಬೆಳ್ಳಾರೆ ಪೊಲೀಸ್ ಉಪ ನಿರೀಕ್ಷಕರಾಗಿದ್ದು ಕಡಬ ಠಾಣೆಗೆ ವರ್ಗಾವಣೆಗೊಂಡ ಆಂಜನೇಯ ರೆಡ್ಡಿ ಅವರನ್ನು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ, ಜಿಲ್ಲಾ ಸಂಚಾಲಕರಾದ ಪರಮೇಶ್ವರ ಕೆಮ್ಮಿಂಜೆ ರಂಗತ್ತಮಲೆ, ಆನಂದ, ಮಾಸ್ಟರ್ ಸ್ಟುಡಿಯೋ ಮಾಲಕರಾದ ಚೆನ್ನಕೇಶವ ಸುಳ್ಯ ಇವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ಮಾತನಾಡಿ ಆಂಜನೇಯ ರೆಡ್ಡಿ ಅವರು ಸುಮಾರು ಎರಡು ವರ್ಷ ಬೆಳ್ಳಾರೆ ಠಾಣೆಯಲ್ಲಿ ಒಬ್ಬ ದಕ್ಷ ಅಧಿಕಾರಿಯಾಗಿ ಜನಮೆಚ್ಚಿದ ಅಧಿಕಾರಿಯಾಗಿ ಬಡವರಿಗೆ ನ್ಯಾಯ ಕೊಡಿಸುತ್ತಾ ದಲಿತ ಜನಾಂಗಕ್ಕೆ ಅನ್ಯಾಯವಾದಾಗ ತಕ್ಷಣ ಸ್ಪಂದಿಸುವ ದಕ್ಷ ಅಧಿಕಾರಿ ಅಧಿಕಾರಿ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಆಂಜನೇಯ ರೆಡ್ಡಿ ಅವರು ಮಾತನಾಡಿ “ದಲಿತ ಸಮುದಾಯದ ಬಡವರಿಗೆ ತೊಂದರೆಯಾದಾಗ ತಕ್ಷಣ ಅಂಬೇಡ್ಕರ್ ರಕ್ಷಣಾ ವೇದಿಕೆ ದಲಿತರ ಪರ ದನಿಯಾಗಿ ಕೆಲಸ ಮಾಡುತ್ತಿರುವುದನ್ನು ಗಮನಿಸಿದ್ದೇನೆ” ಎಂದರು.