- Tuesday
- January 28th, 2025
ಬೆಳ್ಳಾರೆ ಸರಕಾರಿ ಆಸ್ಪತ್ರೆಯಲ್ಲಿ ಆದಿತ್ಯವಾರ ರಜೆ ಇದೆಯೇ ?, ವೈದ್ಯರು ಅಥವಾ ಸಿಬ್ಬಂದಿ ಯಾರಾದರೂ ಒಬ್ಬರೂ ಇರಬೇಕೆ ?, ರಜೆಯಾದರೇ ಬಾಗಿಲು ಹಾಕಬೇಕಲ್ಲವೇ ? ಇಲ್ಲದೇ ರೋಗಿಗಳು ಬಂದು ಕಾಯುವಂತ ಪರಿಸ್ಥಿತಿ ಇದೆ. ಜನ ಬಂದು ಬೆಳಗ್ಗಿನಿಂದ ಕಾಯುತ್ತಿರುವ ಬಗ್ಗೆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಬಗ್ಗೆ ಸಂಬಂಧಪಟ್ಟವರು, ಜನಪ್ರತಿನಿಧಿಗಳು ಉತ್ತರಿಸಬೇಕಾಗಿದೆ. ಜನ ಕಾಯುವ ಪರಿಸ್ಥಿತಿ...
ಜಾಲ್ಸೂರು ಗ್ರಾಮದ ಕುಂಬರ್ಚೋಡು ಭಾಗದ ವಿವಿಧ ಸಮಸ್ಯೆಗಳ ಬಗ್ಗೆ ಸ್ಪಂದಿಸುವಂತೆ ಸಚಿವ ಅಂಗಾರರಿಗೆ ಮನವಿ ಸಲ್ಲಿಸಲಾಯಿತು. ಕುಂಬರ್ಚೋಡಿನ ವಿವಿಧ ಸಮಸ್ಯೆಗಳಾದ ವಿದ್ಯುತ್, ರಸ್ತೆ, ಕಸ ವಿಲೇವಾರಿ, ನೀರು, ಚರಂಡಿ ಸಮಸ್ಯೆ ಸರಿಪಡಿಸಲು ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಅಂಗಾರ ಅವರನ್ನು ಇಂದು ಅವರ ನಿವಾಸದಲ್ಲಿ ಬೇಟಿ ಮಾಡಿ...
ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸುಳ್ಯ ಘಟಕದ ಮಹಿಳಾ ಗೃಹರಕ್ಷಕಿ ರಮ್ಯರಿಗೆ ಮಹಿಳಾ ದಿನಾಚರಣೆಯ ಅಂಗವಾಗಿ ಸನ್ಮಾನ ಕಾರ್ಯಕ್ರಮ ಮಾ.27 ರಂದು ನಡೆಯಿತು. ಇವರು ಪ್ರಸ್ತುತ ಸುಳ್ಯ ಘಟಕದ ಗೃಹರಕ್ಷಕಿಯಾಗಿದ್ದು, ಪೊಲೀಸ್ ಠಾಣಾ ಕರ್ತವ್ಯ, ಚುನಾವಣಾ ಕರ್ತವ್ಯ, ಕೋವಿಡ್ ಕರ್ತವ್ಯ ಹಾಗೂ ಅನೇಕ ಬಂದೋಬಸ್ತ್ ಕರ್ತವ್ಯಗಳನ್ನು ಮಾಡಿರುತ್ತಾರೆ. ಇವರು ಮಾಡಿರುವ ಕರ್ತವ್ಯಗಳನ್ನು ಗುರುತಿಸಿ ಇವರಿಗೆ ದಕ್ಷಿಣ...
ಸುಳ್ಯ ತಾಲ್ಲೂಕು ಕಲ್ಮಕಾರು ಗ್ರಾಮದ ಶೇಣಿ ಮನೆ ಶ್ರೀಮತಿ ಮತ್ತು ಶ್ರೀ ತಾರನಾಥ ಗೌಡರ ಪುತ್ರ ಕುಮಾರ್ ಶೇಣಿ ಅವರ ವಿವಾಹ ನಿಶ್ಚಿತಾರ್ಥವು ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಕೊಡೆಂಚಿ ಮನೆ ಶ್ರೀಮತಿ ಮತ್ತು ಶ್ರೀ ಕೇಶವ ಗೌಡರ ಪುತ್ರಿ ದಿವ್ಯ ಕೆ ಅವರೊಂದಿಗೆ ದಿನಾಂಕ 25/03/2022 ರಂದು ಕೊಡೆಂಚಿಯ ವಧುವಿನ ಮನೆಯಲ್ಲಿ ಜರುಗಿತು
ಸುಳ್ಯದ ಮಾಜಿ ತಹಶೀಲ್ದಾರ್ ಪುತ್ತೂರಿನ ಚಿಲ್ಮೆತ್ತಾರು ಕೋಚಣ್ಣ ರೈ (85) ಇಂದು ಮಂಗಳೂರಿನಲ್ಲಿ ನಿಧನರಾದರು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಮಂಗಳೂರಿನಲ್ಲಿ ಮಗನ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.ಮೃತರು ಪುತ್ರಿಯರಾದ ವಿಜಯ ಹಾಗು ಸುಜಯ, ಪುತ್ರ ಮಂಗಳೂರಿನಲ್ಲಿ ದಂತ ವೈದ್ಯರಾಗಿರುವ ಡಾ| ಮಂಜುನಾಥ್ ಹಾಗೂ ಅಪಾರ ಬಂಧು ಮಿತ್ರರೂ ಅಭಿಮಾನಿಗಳನ್ನು ಆಗಲಿದ್ದಾರೆ. ಕೋಚಣ ರೈಯವರಪತ್ನಿ...
ಸಂಪಾಜೆ : ಗಡಿಕಲ್ಲು ಮಸೀದಿ ಸಮೀಪ ಕಾರು ಮತ್ತು ಬೈಕ್ ನಡುವೆ ಅಪಘಾತ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ರೋಹಿತ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು ಬೈಕ್ ಸವಾರನಿಗೆ ಗುದ್ದಿದೆ ಎನ್ನಲಾಗಿದೆ. ಬೈಕ್ ಸವಾರನ ಪಹದ್ ಕಾಲಿಗೆ, ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿದೆ. ಗಾಯಾಳುವಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ...