- Wednesday
- April 2nd, 2025

ಹರಿಹರ ಪಲ್ಲತ್ತಡ್ಕ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಮಾ.19 ರಂದು 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ರಾಮಚಂದ್ರ ಕಜ್ಜೋಡಿ, ಕೃಪಾ.ಪಿ.ಎಸ್, ಮೇದಪ್ಪ.ಎ, ವೆಂಕಟೇಶ್ ನಾಯಕ್, ವನಿತಾ.ಜಿ, ವೀಣಾ.ಕೆ, ರಶ್ಮಿ ಕಜ್ಜೋಡಿ, ಜಯಶ್ರೀ, ಸೌಮ್ಯ.ಕೆ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.8ನೇ ತರಗತಿಯ ವಿದ್ಯಾರ್ಥಿ ಭುವನೇಶ್ವರ ಸ್ವಾಗತಿಸಿ ಧನ್ಯವಾದ...

ಸುಬ್ರಹ್ಮಣ್ಯದ ಖ್ಯಾತ ವಾಸ್ತು ತಜ್ಞ, ಸಾವಿರಾರು ದೇವಸ್ಥಾನಗಳ ವಾಸ್ತು ಶಿಲ್ಪಿ ಮಹೇಶ ಮುನಿಯಂಗಳ ಅವರಿಗೆ ಮಾ.19 ರಂದು ತಮಿಳುನಾಡಿನ ಹೊಸೋರು ನಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ. ಚೆನ್ನೈನ ಏಶಿಯನ್ ವೇದಿಕ್ ಕಲ್ಚರಲ್ ರಿಸರ್ಚ್ ಯುನಿವರ್ಸಿಟಿ ಗೌರವ ಡಾಕ್ಟರೇಟ್ ಕೊಡಮಾಡಿದೆ. ಮಹೇಶ್ ಮುನಿಯಂಗಳ ಅವರು ಬಿಳಿನೆಲೆ ಗ್ರಾಮದ ಕೈಕಂಬದ ಗೋಪಾಲಿಯವರು. ಮೂಲತಹ ಕಾಸರಗೋಡು ಕಾನತ್ತೂರಿನ...

ಸುಳ್ಯದಲ್ಲಿ ವಿಧಾನಸಭಾ ಕ್ಷೇತ್ರದ ಅಮ್ ಆದ್ಮಿ ಪಾರ್ಟಿ ವತಿಯಿಂದ ಪಂಜಾಬ್ ಜನತೆಗೆ ಅಭಿನಂದನೆ ಮತ್ತು ಪಕ್ಷಕ್ಕೆ ಸೇರ್ಪಡೆ ಹಾಗೂ ಸಾರ್ವಜನಿಕ ಸಭೆಯು ಮಾ.21 ರಂದು ನಡೆಯಲಿದೆ ಎಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವೀಕ್ಷಕ ಅಶೋಕ್ ಎಡಮಲೆ ಹೇಳಿದರು.ಅವರು ಮಾ.19 ರಂದು ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿ, ಕಾನತ್ತಿಲ ಸಂಕೀರ್ಣದಲ್ಲಿರುವ ಸಭಾಂಗಣದಲ್ಲಿ ಮಧ್ಯಾಹ್ನ 2.30ಕ್ಕೆ...

ಆರಂತೋಡು ಸಮೀಪ ಕುಲ್ಚಾರ್ ತಿರುವಿನಲ್ಲಿ ರಿಡ್ಸ್ ಕಾರೊಂದು ಮಗುಚಿ ಬಿದ್ದ ಘಟನೆ ಇಂದು ನಡೆದಿದೆ. ಕಾರಿನಲ್ಲಿದ್ದವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದು, ಕಾರ್ ಜಖಂಗೊಂಡಿದೆ ಎಂದು ತಿಳಿದುಬಂದಿದೆ.

ಅರಂತೋಡು ಗ್ರಾಮ ಪಂಚಾಯತ್ ಅನುದಾನದಡಿ ತೊಡಿಕಾನ ಗ್ರಾಮದ ದೊಡ್ಡಕುಮೇರಿ – ದೇವರಗುಂಡಿ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಗುದ್ದಲಿ ಪೂಜೆ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ ಗುದ್ದಲಿ ಪೂಜೆ ನೆರವೇರಿಸಿದರು . ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ಪಂಜಿಕೋಡಿ , ವಿನೋದ ಚಂದ್ರಶೇಖರ್ , ಭವಾನಿ ಚಿಟ್ಟನ್ನೂರು , ಶಶಿಧರ ದೊಡ್ಡಕುಮೇರಿ , ಸ್ಥಳೀಯರಾದ...

ಮಾವಿನಕಟ್ಟೆ ಉದಯಗಿರಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ದೈವದ ಒತ್ತೆಕೋಲ ಮಹೋತ್ಸವ ಮಾ.18 ಮತ್ತು 19 ರಂದು ವಿಜ್ರಂಭಣೆಯಿಂದ ನಡೆಯಿತು.ಮಾ.18 ರಂದು ಬೆಳಿಗ್ಗೆ ಗಣಪತಿ ಹವನ, ಮೇಲೆರಿ ಕಾರ್ಯಕ್ರಮ, ಅಶ್ವತ್ಥ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಭಂಡಾರ ತೆಗೆದು ಮೇಲೇರಿಗೆ ಅಗ್ನಿ ಸ್ಪರ್ಶ, ಸಾರ್ವಜನಿಕ ಅನ್ನ ಸಂತರ್ಪಣೆ, ರಾತ್ರಿ ಕುಳಿಚಾಟ ನಡೆಯಿತು.ಮಾ.19ರಂದು ಮುಂಜಾನೆ ಕಳಸಾಟಕ್ಕೆ ಹೋಗುವುದು,...

ಅಚ್ರಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಧ್ಯಾ ರಶ್ಮಿ ಸೇವಾ ಸಂಘ ಹಾಗೂ 4ಹೆಚ್ ಟ್ರಸ್ಟ್ ಇವರ ವತಿಯಿಂದ ನೀಡಿದ ಶಾಲೆಯ ಗ್ರಂಥಾಲಯದ ಕೋಣೆಗೆ ಪ್ಲೇವುಡ್ ಸ್ಕ್ರೀನ್ ಹಾಗೂ ಪುಸ್ತಕಗಳ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಗ್ರಂಥಾಲಯದ ಕೋಣೆಗೆ ಪ್ಲೇವುಡ್ ಸ್ಕ್ರೀನ್ ಅಳವಡಿಕೆಗೆ ಮಾಡಿಸಿದ ಶಾಲೆಯ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು ಹಾಗೂ ಸಂಧ್ಯಾ ರಶ್ಮಿ...

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾ ಘಟಕದ ವತಿಯಿಂದ ನಡೆಯುವ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ 29 ನೇ ಅಭಿಯಾನ ಉಬರಡ್ಕ ಶಾಲೆಯಲ್ಲಿ ಇಂದು ನಡೆಯಿತು, ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ ಇದರ ಸಂಘಟಕರಾದ ಉನೈಸ್ ಪೆರಾಜೆ ಯ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಶಿಕ್ಷಣಾಧಿಕಾರಿ ಮಹದೇವ್ ರವರು...

ಪೆರಾಜೆ ಗ್ರಾಮದ ದಿ ಚಂಗಪ್ಪ ಗೌಡರ ಪತ್ನಿ ಕಮಲ( ೯೦.ವರ್ಷ) ಮಾ.೧೮ ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ನಿಧನರಾದರು. ಮೃತರು ಪುತ್ರರಾದ ಪುರುಷೋತ್ತಮ, ಕೇಶವ, ಯಶವಂತ ಹಾಗು ಪುತ್ರಿಯರಾದ ದೇವಮ್ಮ ಗರುಗುಂಜ, ಉದಯಕುಮಾರಿ ಪಾಲಾರು, ಸೇವಂತಿಗೆ ಕಟ್ಟಕ್ಕೋಡಿ, ಕುಸುಮಾವತಿ ಪೆರುಮುಂಡ, ಲೋಲಾಜಾಕ್ಷಿ ಕುದ್ಪಾಜೆ ಹಾಗು ಸೊಸೆಯಂದಿರು ,ಅಳಿಯಂದಿರು ,ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.