

ಮಡಪ್ಪಾಡಿ ಅಕ್ಷಯ ಸಂಜೀವಿನಿ ಜಿ.ಪಿ.ಎಲ್.ಎಫ್. ವತಿಯಿಂದ ಯುವಕ ಮಂಡಲ ಸಭಾ ಭವನದಲ್ಲಿ ವಿಶ್ವ ಮಹಿಳಾ ದಿನದ ಅಂಗವಾಗಿ ಮಹಿಳೆಯರಿಗೆ ಸ್ಪರ್ಧಾ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಸಂಜೀವಿನಿ ಸಂಘದ ಮಹಿಳಾ ಸದಸ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಿತ್ರದೇವ ಎಂ., ಪಂಚಾಯತ್ ಸದಸ್ಯೆ ಸುಜಾತ ,ಎನ್.ಆರ್.ಎಲ್.ಎಮ್. ನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ವೇತ , ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶಕುಂತಲ ಕೆ., ಉಪಾಧ್ಯಕ್ಷರಾದ ದುರ್ಗೇಶ್ವರಿ ಪಿ. ಹಾಗೂ ಸಂಜೀವಿನಿ ಮಹಿಳಾ ಸದಸ್ಯರು, ಎಂ ಬಿ ಕೆ,ಎಲ್ ಸಿ ಅರ್ ಪಿ, ಕೃಷಿ ಸಖಿ, ಬ್ಯಾಂಕ್ ಸಖಿ ಭಾಗವಹಿಸಿದ್ದರು. ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎನ್.ಆರ್.ಎಲ್.ಎಮ್. ನ ತಾಲೂಕು ವ್ಯವಸ್ಥಾಪಕಿ ಶ್ವೇತ ಅವರು ಸಂಜೀವಿನಿ ಸಂಘದ ಮಹಿಳೆಯರು ತಯಾರಿಸಿದ ವಸ್ತು ಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಒದಗಿಸುವ ಭರವಸೆ ನೀಡಿದರು, ಹಾಗೂ ಯಾವ ಯಾವ ಪ್ರಾಡಕ್ಟ್ ಗಳನ್ನು ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ಯನ್ನು ನೀಡಿದರು.