ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾ.02 ರಂದು ಕೊರತಿ ದೈವದ 7ನೇ ವರ್ಷದ ನೇಮೋತ್ಸವ ಹಾಗೂ ಮಾ.03 ರಿಂದ ಮಾ.04 ರವರೆಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ 53ನೇ ವರ್ಷದ ಒತ್ತೆಕೋಲ ನಡೆಯಿತು.
ಮಾ.02 ರಂದು ರಾತ್ರಿ ಶ್ರೀ ಕೊರತಿ ದೈವದ ನಡಾವಳಿ ಹಾಗೂ ಅನ್ನಸಂತರ್ಪಣೆ ನಡೆಯಿತು.
ಮಾ.03 ರಂದು ಸಂಜೆ ಭಂಡಾರ ತೆಗೆದು, ಮೇಲೇರಿಗೆ ಅಗ್ನಿ ಸ್ಪರ್ಶ ನಡೆಯಿತು. ಶೃಂಗೇರಿ ಫ್ರೆಂಡ್ಸ್ ಕುಲ್ಕುಂದ-ಕಾಲನಿ ಪ್ರಾಯೋಜಕತ್ವದಲ್ಲಿ ತುಳುನಾಡ ಗಾನ ಗಂಧರ್ವ ಸಂಗೀತ ಸೇವಾ ಪ್ರತಿಷ್ಠಾನ.(ರಿ) ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಗದೀಶ್ ಆಚಾರ್ಯ ಪುತ್ತೂರು ಹಾಗೂ ಬಳಗದವರಿಂದ ಸಂಗೀತ-ಗಾನ-ಸಂಭ್ರಮ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಜಗದೀಶ್ ಆಚಾರ್ಯ ಪುತ್ತೂರು ಅವರನ್ನು ಶೃಂಗೇರಿ ಫ್ರೆಂಡ್ಸ್ ಕುಲ್ಕುಂದ ವತಿಯಿಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ರವೀಂದ್ರ ಕುಮಾರ್ ರುದ್ರಪಾದ ಅವರು ಸನ್ಮಾನಿಸಿದರು. ನಂತರ ಅನ್ನಸಂತರ್ಪಣೆ ನಡೆಯಿತು. ನಂತರ ಕುಲ್ಚಾಟ ದೈವದ ನಡಾವಳಿ ನಡೆಯಿತು. ನಂತರ ಖ್ಯಾತ ಭಾಗವತೆ ಭವ್ಯಶ್ರೀ ಕುಲ್ಕುಂದ ಭಾಗವತಿಕೆಯಲ್ಲಿ ಕಲಾವಿದ ಶ್ರೀಕೃಷ್ಣ ಶರ್ಮ ಸಂಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಸುದರ್ಶನ ಗರ್ವಭಂಗ ಭಾರ್ಗವ ವಿಜಯ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಿತು.
ಮಾ.04 ರಂದು ಶ್ರೀ ಮಹಾವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಬೆಳಿಗ್ಗೆ ಮಾರಿಕಳ ಹಾಗೂ ಗಂಧ-ಪ್ರಸಾದ ವಿತರಣೆ ನಡೆಯಿತು. ನಂತರ ಗುಳಿಗ ದೈವದ ನಡಾವಳಿ ನಡೆಯಿತು.
ವರದಿ :- ಉಲ್ಲಾಸ್ ಕಜ್ಜೋಡಿ